ಮಕ್ಕಳೆದುರೇ ಪತ್ನಿಯ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದ ರೌಡಿಶೀಟರ್! - Mahanayaka
8:31 PM Tuesday 18 - November 2025

ಮಕ್ಕಳೆದುರೇ ಪತ್ನಿಯ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದ ರೌಡಿಶೀಟರ್!

banglore
27/06/2023

ಬೆಂಗಳೂರು: ಪತ್ನಿಯ ಅಕ್ರಮ‌ ಸಂಬಂಧ‌ ಶಂಕಿಸಿ ರೌಡಿಶೀಟರ್ ಪತಿಯೊಬ್ಬ ಮಕ್ಕಳೆದುರೇ ತನ್ನ ಪತ್ನಿಯ ಗುಪ್ತಾಂಗಕ್ಕೆ ಚಾಕು ಇರಿದ‌  ಘಟನೆ ಆಡುಗೋಡಿ ಬಳಿಯ ಬಜಾರ್ ಸ್ಟ್ರೀಟ್‍ನಲ್ಲಿ ನಡೆದಿದೆ.

ನೀಲಸಂದ್ರ ನಿವಾಸಿ ದಯಾನಂದ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ.  ಆರೋಪಿ ಕೆಲವು ವರ್ಷಗಳ ಹಿಂದೆ ಮಹಿಳೆಯನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರತಿ ದಿನ ಮನೆಗೆ ಬರುವ ಮುನ್ನ ಕುಡಿದು ಬಂದು ಆರೋಪಿ ಗಲಾಟೆ ಮಾಡುತ್ತಿದ್ದ. ಕ್ರೈಂ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಆರೋಪಿ 3 ದಿನದ ಹಿಂದೆಯಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಕೊಲೆ ಪ್ರಕರಣವೊಂದರಿಂದ ಹೊರ ಬಂದಿದ್ದ.

ಭಾನುವಾರ ರಾತ್ರಿ ಕುಡಿದು ಬಂದು ಪತ್ನಿ ಪ್ರಿಯಾಂಕಾ ಫೋನ್‍ನಲ್ಲಿ ಯಾರೊಂದಿಗೋ ಮಾತನಾಡುತ್ತಾಳೆ ಎಂದು ಗಲಾಟೆ ಶುರು ಮಾಡಿದ್ದಾನೆ. ಅಲ್ಲದೇ ಆಕೆ ಕೆಲಸ ಮಾಡುವ ಸ್ಥಳದಲ್ಲಿ ಬೇರೋಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಆಕೆಯ ತೊಡೆ ಹಾಗೂ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಇಷ್ಟು ಮಾತ್ರವಲ್ಲದೇ ಪ್ರಿಯಾಂಕಾ ಜೋರಾಗಿ ಕಿರುಚಿದ್ದು ಸ್ಥಳೀಯರು ಸೇರಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ.

ಕೂಡಲೇ ಸೇರಿದ್ದ ಜನ 112ಕ್ಕೆ ಕರೆ ಮಾಡಿದ್ದು, ಪೊಲೀಸರು  ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಡುಗೋಡಿ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ