ಬಸ್-ಟ್ರ್ಯಾಕ್ಟರ್ ಡಿಕ್ಕಿ: 5 ಯಾತ್ರಾರ್ಥಿಗಳ ಸಾವು; 30 ಮಂದಿಗೆ ಗಾಯ - Mahanayaka

ಬಸ್-ಟ್ರ್ಯಾಕ್ಟರ್ ಡಿಕ್ಕಿ: 5 ಯಾತ್ರಾರ್ಥಿಗಳ ಸಾವು; 30 ಮಂದಿಗೆ ಗಾಯ

16/07/2024


Provided by

ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಯಾತ್ರಿಕರು ಸಾವನ್ನಪ್ಪಿದ್ದಾರೆ. ಅಲ್ಲದೇ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ವಾರ್ಕರಿಗಳು (ವಿಠ್ಠಲನ ಭಕ್ತರು) ಆಗಿದ್ದು, ಆಷಾಢ ಏಕಾದಶಿ ಆಚರಣೆಗಾಗಿ ಮುಂಬೈ ಬಳಿಯ ತಮ್ಮ ಊರಾದ ಡೊಂಬಿವ್ಲಿಯಿಂದ ಪಂಢರಪುರಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯರಾತ್ರಿಯ ಸುಮಾರಿಗೆ ಬಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಕಮರಿಗೆ ಬಿದ್ದಿದೆ.

ಡೊಂಬಿವ್ಲಿಯಿಂದ ಒಟ್ಟು 42 ಪ್ರಯಾಣಿಕರು ಪಂಢರಪುರಕ್ಕೆ ತೆರಳುತ್ತಿದ್ದಾಗ ಅಡ್ನೆ ಗ್ರಾಮದ ಬಳಿ ಬಸ್ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದಿದೆ ಎಂದು ಡಿಸಿಪಿ ವಿವೇಕ್ ಪನ್ಸಾರೆ ಸುದ್ದಿಗಾರರಿಗೆ ತಿಳಿಸಿದರು. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು. ನವೀ ಮುಂಬೈ ಡಿಸಿಪಿ ವಿವೇಕ್ ಪನ್ಸಾರೆ ಮಾತನಾಡಿ, “ಆಷಾಢ ಏಕಾದಶಿ ಸಂದರ್ಭದಲ್ಲಿ ಜನರು ಖಾಸಗಿ ಬಸ್ ಮೂಲಕ ಪಂಢರಪುರಕ್ಕೆ ತೆರಳುತ್ತಿದ್ದರು. ಬಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದಿದೆ. ಗಾಯಗೊಂಡ 42 ಜನರನ್ನು ಎಂಜಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಮೂವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 5 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ