ರಾತ್ರಿ ವೇಳೆ ಶಾಸಕ ಎನ್.ಮಹೇಶ್ ಕಚೇರಿ ತೆರೆದು ಕಡತ ಯಜ್ಞ: ಕಂಪ್ಯೂಟರ್ ಆಪರೇಟರ್ ವಿಚಾರಣೆ - Mahanayaka

ರಾತ್ರಿ ವೇಳೆ ಶಾಸಕ ಎನ್.ಮಹೇಶ್ ಕಚೇರಿ ತೆರೆದು ಕಡತ ಯಜ್ಞ: ಕಂಪ್ಯೂಟರ್ ಆಪರೇಟರ್ ವಿಚಾರಣೆ

n mahesh office
01/05/2023


Provided by

ಚಾಮರಾಜನಗರ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾತ್ರಿ ವೇಳೆ ಶಾಸಕ ಕಚೇರಿಯನ್ನು ತೆರೆದು ಕೆಲಸ ಮಾಡುತ್ತಿದ್ದ ಘಟನೆ ಕೊಳ್ಳೇಗಾಲದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕೊಳ್ಳೇಗಾಲ ಬಿಜೆಪಿ ಶಾಸಕ ಎನ್. ಮಹೇಶ್ ಅವರ ಶಾಸಕ ಕಚೇರಿ ಕಂಪ್ಯೂಟರ್ ಆಪರೇಟರ್ ಕಿರಣ್ ಎಂಬಾತನನ್ನು ಚುನಾವಣಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.‌ ಶಾಸಕರ ಕಚೇರಿ ತೆರೆದು ಕೆಲವೊಂದು ಕಡತಗಳನ್ನು ಕಿರಣ್ ಪರಿಶೀಲನೆ ನಡೆಸುತ್ತಿದ್ದ ಎನ್ನಲಾಗಿದ್ದು ಚುನಾವಣಾಧಿಕಾರಿ ಚಿಣ್ಮಯ್ ಕಾರ್ಯಾಚರಣೆ ನಡೆಸಿ ಕಿರಣ್ ನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಪರಿಶೀಲನೆ ವೇಳೆ ಕೆಲವು ದಾಖಲಾತಿಗಳು, ಫಲಾನುಭವಿಗಳ ಪಟ್ಟಿ ದೊರೆತಿದೆ ಎಂದು ಎಂದು ತಿಳಿದುಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ