ಅತ್ಯಾಚಾರ ಪ್ರಕರಣ ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ ಆರೋಪಿ - Mahanayaka
10:49 PM Wednesday 17 - September 2025

ಅತ್ಯಾಚಾರ ಪ್ರಕರಣ ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ ಆರೋಪಿ

05/03/2021

ಜೈಪುರ: ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ ಘೋರ ಘಟನೆ ರಾಜಸ್ಥಾನದ ಹನುಮಾನ್‌ಘರ್ ಜಿಲ್ಲೆಯಲ್ಲಿ ನಡೆದಿದ್ದು,  ಯುವತಿಗೆ ಗಂಭೀರವಾಗಿ ಗಾಯವಾಗಿದೆ.


Provided by

2018ರಲ್ಲಿ  ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಪ್ರಕರಣದ ಬಳಿಕ ಪತಿಯ ವೈಮನಸ್ಸಿಗೆ ಕಾರಣವಾಗಿದ್ದ ಸಂತ್ರಸ್ತ ಮಹಿಳೆಯು, ತನ್ನ ಮಗಳೊಂದಿಗೆ ಅಜ್ಜಿ ಮನೆಯಲ್ಲಿ  ವಾಸಿಸುತ್ತಿದ್ದಳು.

ಗುರುವಾರ ಬೆಳ್ಳಂಬೆಳಗ್ಗೆ ಅತ್ಯಾಚಾರ  ಪ್ರಕರಣದ ಆರೋಪಿ  ಪ್ರದೀಪ್ ವಿಷ್ಹೋಯ್, ಏಕಾಏಕಿ ಸಂತ್ರಸ್ತೆಯ ಮನೆಗೆ ನುಗ್ಗಿ ಮನೆಯ ನೆಲದ ಮೇಲೆ ಸೀಮೆ ಎಣ್ಣೆ ಚೆಲ್ಲಿದ್ದು, ಬಳಿಕ ಬೆಂಕಿ ಹಚ್ಚಿ ಮನೆಯ ಬಾಗಿಲು ಮುಚ್ಚಿ ಪರಾರಿಯಾಗಿದ್ದಾನೆ.

ಬೆಂಕಿ ಮನೆಯಲ್ಲಿ ವ್ಯಾಪಿಸಿದ್ದು, ಸಂತ್ರಸ್ತ ಮಹಿಳೆಯ ಮೈಗೆ ಬೆಂಕಿ ತಗಲಿದ್ದು, ಆಕೆ ತೀವ್ರವಾಗಿ ಗಾಯಗೊಂಡಿದ್ದಾಳೆ ಎಂದು  ಪೊಲೀಸರು ತಿಳಿಸಿದ್ದಾರೆ.  ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು,  ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ