ಅತ್ಯಾಚಾರಿಯ ಮಗುವಿಗೆ ಜನ್ಮ ನೀಡಿದ 12 ವರ್ಷದ ಬಾಲಕಿ ಸಾವು! - Mahanayaka

ಅತ್ಯಾಚಾರಿಯ ಮಗುವಿಗೆ ಜನ್ಮ ನೀಡಿದ 12 ವರ್ಷದ ಬಾಲಕಿ ಸಾವು!

11/01/2021


Provided by

ಡೆಹ್ರಾಡೂನ್: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ 12 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿ ಮೃತಪಟ್ಟಿರುವ ಘಟನೆ ಉತ್ತರರಾಖಂಡದ ರುದ್ರಪುರದಲ್ಲಿ ನಡೆದಿದ್ದು, ಸಾವಿನ ವೇಳೆ ಬಾಲಕಿ ಅತ್ಯಾಚಾರದ ಆರೋಪಿ ಹೆಸರನ್ನು ತಿಳಿಸಿದ್ದಾಳೆ.

ಠಾಕೂರ್ ನಿವಾಸಿಯಾಗಿರುವ 12 ಬಾಲಕಿ ಬಾಲಕಿಗೆ ಶನಿವಾರ ರಾತ್ರಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.  ಇದರಿಂದಾಗಿ ಕುಟುಂಬಸ್ಥರು ಆಕೆಯನ್ನು ತಕ್ಷಣವೇ ಉದ್ದಮ್ ಸಿಂಗ್ ನಗರದ ಜೆಎಲ್ ನೆಹರೂ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ತಕ್ಷಣವೇ ವೈದ್ಯರು ಪರೀಕ್ಷೆ ನಡೆಸಿದಾಗ ಬಾಲಕಿ 7 ತಿಂಗಳ ಗರ್ಭಿಣಿ ಎನ್ನುವುದು ತಿಳಿದು ಬಂದಿದೆ.

7 ತಿಂಗಳಿನಲ್ಲಿಯೇ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು,  ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ ಹೆರಿಗೆಯ ಬಳಿಕ ಆಕೆ ಮೃತಪಟ್ಟಿದ್ದಾಳೆ. ಅಕಾಲಿಕ ಹೆರಿಕೆಯ ಕಾರಣ ಬಾಲಕಿ ಮೃತಪಟ್ಟಿದ್ದು, ಸಾವಿಗೂ ಮೊದಲು ಬಾಲಕಿ ತನ್ನ ಮೇಲೆ ನೆರೆ ಮನೆಯ ವ್ಯಕ್ತಿ, ಚಾಕೊಲೇಟ್ ನೀಡುವುದಾಗಿ ಕರೆದೊಯ್ದು ಕೆಲವು ತಿಂಗಳ ಹಿಂದೆ ಅತ್ಯಾಚಾರ ಎಸಗಿದ್ದ ಎಂದು ತಿಳಿಸಿದ್ದಾಳೆ.

ಬಾಲಕಿಯ ಹೇಳಿಕೆಯ ಅನ್ವಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಮಂದಲ್(22) ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನ ಡಿಎನ್ ಎ ಮಾದರಿ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಬಾಲಕಿಯ ದೇಹದ ಬದಲಾವಣೆಗಳನ್ನು ಪೋಷಕರು ಪ್ರಶ್ನಿಸಿದ್ದರೂ ಆಕೆ ಸರಿಯಾಗಿ ಉತ್ತರಿಸಿರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಆಕೆ ಪೋಷಕರ ಪ್ರಶ್ನೆಗೆ ಉತ್ತರಿಸಿದ್ದಾಳೆ.

ಇತ್ತೀಚಿನ ಸುದ್ದಿ