ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಕಳ್ಳರು! - Mahanayaka
5:37 PM Wednesday 15 - October 2025

ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಕಳ್ಳರು!

02/03/2021

ಚೆನ್ನೈ: ಎಟಿಎಂ ಯಂತ್ರವನ್ನು ಬುಡ ಸಮೇತವಾಗಿ ಕಿತ್ತು ವಾಹನದಲ್ಲಿ ತುಂಬಿಸಿಕೊಂಡು ಎಟಿಎಂ ಕಳ್ಳರು  ಪರಾರಿಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.


Provided by

ತಮಿಳುನಾಡಿನ ತಿರುಪುರದಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಯಂತ್ರವನ್ನು ಕಳ್ಳತನ ನಡೆಸಲಾಗಿದೆ. ದರೋಡೆಕೋರರು ಎಟಿಎಂ ಯಂತ್ರವನ್ನು ತೆರೆಯಲು ಯತ್ನಿಸಿದ್ದಾರೆ. ಆದರೆ ಎಟಿಎಂ ತೆರೆಯಲಿಲ್ಲ. ಈ ವೇಳೆ ಎಟಿಎಂ ಯಂತ್ರವನ್ನೇ ಕಿತ್ತು, ವಾಹನವೊಂದರಲ್ಲಿ ತುಂಬಿಸಿ ಕೊಂಡೊಯ್ದಿದ್ದಾರೆ.

ಭಾನುವಾರ ಸಂಜೆ 4:30ತ ವೇಳೆಗೆ ಈ ಘಟನೆ ನಡೆದಿದೆ. ನಾಲ್ವರು ಯುವಕರಿದ್ದ ಕಳ್ಳರ ತಂಡ ಈ ಕೃತ್ಯ ನಡೆಸಿದೆ. ಈ ನಾಲ್ವರು ಕೂಡ ಮುಖವನ್ನು ಮುಚ್ಚಿಕೊಂಡಿದ್ದರು. ಕಳೆದ 2 ವರ್ಷಗಳಿಂದಲೂ ಈ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ನ್ನೇ ನೇಮಕ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಬ್ಯಾಂಕ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಸದ್ಯ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

whatsapp

ಇತ್ತೀಚಿನ ಸುದ್ದಿ