ಕಾಂಗ್ರೇಸ್ ನಿಂದ ಹಿಂದೂಗಳ ಮೇಲೆ ದಾಳಿ: ನಯನತಳವಾರ

ಮೂಡಿಗೆರೆ: ಕನ್ನಡದ ಪುಜಾರಿ. ಕಣ್ಮಣಿ ದೇಶ ಕಂಡ ಧೀಮಂತ ಚಿಂತಕ ಹಿರೇಮಗಳೂರು ಕಣ್ಣನ್ ಸೇರಿದಂತೆ ಅರ್ಚಕರಿಗೆ ಸರ್ಕಾರ ಕೊಟ್ಟ ಸಂಬಳವನ್ನು ವಾಪಸ್ ನೀಡಿ ಎಂದು ನೋಟಿಸ್ ನೀಡಿರುವುದು ಹಿಂದೂ ಶ್ರದ್ಧಾ ಕೇಂದ್ರ ದೇವಸ್ಥಾನಗಳನ್ನು ಮುಚ್ಚುವ ಕಾಂಗ್ರೇಸ್ ಸರ್ಕಾರದ ಹುನ್ನಾರ ಎಂದು ಬಿಜೆಪಿ ವಕ್ತಾರ ನಯನ ತಳವಾರ ಅರೋಸಿದ್ದಾರೆ.
ಅವರು ಹೇಳಿಕೆಯಲ್ಲಿ ತಿಳಿಸಿ. ಶ್ರೀರಾಮ ದೇವಸ್ಥಾನ ನಿರ್ಮಾಣ ವಿರೋದಿಸಿ ಪ್ರಾಣ ಪ್ರತಿಷ್ಠಾಪನೆ ಒಂದು ದಿನದ ರಜೆಯನ್ನು ನೀಡದೆ ಮಕ್ಕಳು. ಪೋಷಕರು. ಮತ್ತು ಹಿಂದೂಗಳಿಂದ ಶಾಪ ಹಾಕಿಸಿಕೊಳ್ಳುತ್ತಿರುವ ಸಮಯದಲ್ಲೆ. ಕನ್ನಡದಲ್ಲೇ ಮಂತ್ರ ಉಚ್ಚಾರಗಳನ್ನು ಇಡೀ ಸಮಾಜಕ್ಕೆ ನೀಡಿ ಈ ಮೂಲಕ ಮದುವೆ. ಪೋಜೆಗಳನ್ನು ಕನ್ನಡ ಮಯಗೋಳಿಸಿ ಶಾಸ್ತ್ರೀಯ ಭಾಷೆ ಯಾಗಿಸಲು ಸಹಕರಿಸಿದ ಹಿರೇಮಗಳೂರು ಕಣ್ಣನ್ ಇವರಿಗೆ ನಿಮ್ಮ ಕೊದಂಡರಾಮ ದೇವಸ್ಥಾನದಿಂದ ಆದಾಯ ಸರ್ಕಾರಕ್ಕೆ ಬರುತ್ತಿಲ್ಲ ಎಂಬ ಕಾರಣ ನೀಡಿ.ಕೊಟ್ಟ ಸಂಬಳ ವಾಪಸ್ ನೀಡಿ ಎಂದು ನೋಟಿಸ್ ನೀಡಿರುವುದು ಖಂಡನೀಯ. ಸರ್ಕಾರ ರಾಜ್ಯದ ಹಲವು ದೇವಸ್ಥಾನಗಳನ್ನು ಮುಜರಾಯಿ ವ್ಯಾಪ್ತಿಗೆ ಸೇರಿಸಿಕೊಂಡು. ಇದಕ್ಕೆ ಒಬ್ಬ ಸಚಿವರನ್ನು ಇಟ್ಟುಕೊಂಡು ಸಾವಿರಾರು ಕೋಟಿ ಹಣವನ್ನು ಹಲವು ದೇವಸ್ಥಾನಗಳಲ್ಲಿ ಭಕ್ತರಿಂದ ಸ್ವೀಕರಿಸಿ ಆ ಹಣವನ್ನು ಅಭಿವೃದ್ಧಿ ಹೆಸರಲ್ಲಿ ಬೇರೆ ದರ್ಮದ ಉದ್ದಾರಕ್ಕೆ ಬಳಸಿಕೊಂಡು ಅದನ್ನು ಕೊಳ್ಳೆ ಹೊಡೆಯುತ್ತಿದ್ದು. ಈಗಾಗಲೇ ಸುಬ್ರಮಣ್ಯ. ಕಟೀಲು. ಕೊಲ್ಲೂರು ಮುಂತಾದ ದೇವಸ್ಥಾನಗಳಿಂದ ಬರುತ್ತಿರುವ ದೊಡ್ಡ ಮಟ್ಟದ ಆದಾಯವನ್ನು ಇವರು ವಾಪಸ್ ಅದೇ ದೇವಸ್ಥಾನಕ್ಕೆ ಮತ್ತು ಅರ್ಚಕರ ಸಂಬಳಕ್ಕೆ ನೀಡುತ್ತಾರೆಯೆ ಎಂದು ಪ್ರಶ್ನಿಸುತ್ತಿದ್ದು. ಒಂದು ಇಲಾಖೆ ನಡೆಯಬೇಕೆಂದರೆ ಲಾಭ ಇರುವ ಕಡೆಯಿಂದ ನಷ್ಟವನ್ನು ಬರಿಸಬೇಕು ಎಂಬ ನಿಯಮವನ್ನು ಅರಿಯದಷ್ಟು ಮೂಡರಾಗಿದ್ದು. ಈಗಾಗಲೆ ಪೂಜೆ ಮಾಡಲು ಅರ್ಚಕರು ಸಿಗದಷ್ಷು ವ್ಯವಸ್ಥೆ ಸೃಷ್ಠಿಯಾಗಿದ್ದು. ಬದುಕಲು ಪರದಾಡುತ್ತಿರುವ ಬಡ ದೇವಸ್ಥಾನಗಳ ಅರ್ಚಕರಿಗೆ ಕಾಂಗ್ರೆಸ್ ನೆತೃತ್ವದ ಸರ್ಕಾರ ನೋಟಿಸ್ ನೀಡುತ್ತಿರುವುದು ಶ್ರದ್ಧೆಯ ಹಿಂದೂ ಧರ್ಮದ ದೇವಾಲಯಗಳನ್ನು ಮುಚ್ಚುವ ಹುನ್ನಾರವಾಗಿದ್ದು.
ಏನೂ ಅದಾಯ ಬರದ ಮದ್ರಸಾ ಮಸೀದಿ ಚರ್ಚ್ ಗಳಿಗೆ ನೀಡುತ್ತಿರುವ ಅನುದಾನ ವಾಪಾಸು ಪಡೆಯಲು ನಿಮಗೆ ಸಾದ್ಯವೆ.. ಕೂಡಲೆ ಸರ್ಕಾರ ಅದೇಶ ವಾಪಾಸು ಹಿಂಪಡೆಯದಿದ್ದಲ್ಲಿ ಮತ್ತು ಅರ್ಚಕರ ಸಂಬಳವನ್ನು ಹೆಚ್ಚು ಮಾಡಬೇಕು. ಬಡ ದೇವಸ್ಥಾನಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು. ಮತ್ತು ನೋಟೀಸ್ ನೀಡಿದ ತಹಶಿಲ್ದಾರ್ ಅನ್ನು ವಜಾಗೋಳಿಸಬೇಕು ಎಂದು ಅಗ್ರಹಿಸಿದ್ದಾರೆ.