ಮೌಲಾನಾ ಮೇಲೆ ನಾಲ್ವರು ಯುವಕರಿಂದ ಹಲ್ಲೆ: ಠಾಣೆ ಎದುರು ರಾತ್ರೋ ರಾತ್ರಿ ಪ್ರತಿಭಟನೆ - Mahanayaka
4:44 AM Thursday 16 - October 2025

ಮೌಲಾನಾ ಮೇಲೆ ನಾಲ್ವರು ಯುವಕರಿಂದ ಹಲ್ಲೆ: ಠಾಣೆ ಎದುರು ರಾತ್ರೋ ರಾತ್ರಿ ಪ್ರತಿಭಟನೆ

bagalakote
19/08/2024

ಬಾಗಲಕೋಟೆ: ಅಂಜುಮಾನ್ ಮಸೀದಿಯ ಮೌಲಾನಾ ಮೇಲೆ ನಾಲ್ವರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಘಟನೆಯಿಂದ ಆಕ್ರೋಶಗೊಂಡ ಮುಸ್ಲಿಮ್ ಮುಖಂಡರು ರಾತ್ರೋ ರಾತ್ರಿ ಠಾಣೆ ಬಳಿಯಲ್ಲಿ ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿದರು.


Provided by

ಬಾಗಲಕೋಟೆಯ ನವನಗರದ ಸೆಕ್ಟರ್ ನಂ.4 ರಲ್ಲಿ ಈ ಘಟನೆ ನಡೆದಿದೆ ಅಂತ ತಿಳಿದು ಬಂದಿದೆ. ಕಾರ್ತಿಕ್, ಗಣೇಶ್, ಶಿವು ಹಾಗೂ ಆದಿತ್ಯ ಎಂಬ ಯುವಕರು ಮೌಲಾನಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆಯ ಬೆನ್ನಲ್ಲೇ ಆರೋಪಿಗಳಾದ ಕಾರ್ತಿಕ್‌ ಹಾಗೂ ಪ್ರೀತಮ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಹಲ್ಲೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

ಸ್ಥಳದಲ್ಲಿ ಸಾಕಷ್ಟು ಜನರು ಸೇರಿದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ