ಲಂಚಪಡೆಯುತ್ತಿದ್ದ ವೇಳೆ ದಾಳಿ: ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಸಹಾಯಕ - Mahanayaka

ಲಂಚಪಡೆಯುತ್ತಿದ್ದ ವೇಳೆ ದಾಳಿ: ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಸಹಾಯಕ

shivanna
22/02/2023


Provided by

ಚಿಕ್ಕಮಗಳೂರು:  ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಸಹಾಯಕನೋರ್ವ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.

ಗ್ರಾಮ ಸಹಾಯಕ ಶಿವಣ್ಣ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಹಕ್ಕು ಪತ್ರ ನೀಡಲು 10 ಸಾವಿರ ಹಣ ಲಂಚ  ನೀಡುವಂತೆ ಈತ ಬೇಡಿಕೆಯಿಟ್ಟಿದ್ದ.

10 ಸಾವಿರ ಲಂಚ ಕೇಳಿದ್ದ ಈತ ಮುಂಗಡವಾಗಿ 3 ಸಾವಿರ ಈಗಾಗಲೇ ಪಡೆದುಕೊಂಡಿದ್ದ.  ಉಳಿದ ಮೊತ್ತವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದಿದ್ದಾರೆ.

ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ಈ ದಾಳಿ ನಡೆದಿದ್ದು, ಲಂಚಬಾಕ ಅಧಿಕಾರಿಗಳಿಗೆ ಈ ದಾಳಿ ಎಚ್ಚರಿಕೆಯ ಕರೆಗಂಟೆಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ