ಪ್ರವಾಸಿಗರೇ ಗಮನಿಸಿ: 20ರಂದು ಬಂಡೀಪುರ ಸಫಾರಿ ಬಂದ್ - Mahanayaka

ಪ್ರವಾಸಿಗರೇ ಗಮನಿಸಿ: 20ರಂದು ಬಂಡೀಪುರ ಸಫಾರಿ ಬಂದ್

bundypura
20/09/2023

ಚಾಮರಾಜನಗರ: ಬಂಡೀಪುರದಲ್ಲಿ ಬುಧವಾರ ಸಫಾರಿ ನಡೆಸುವ ಪ್ಲಾನ್ ಮಾಡಿಕೊಂಡಿದ್ದರೇ ಮುಂದೂಡಿ ಏಕೆಂದರೆ ಅಂದು ಬಂಡೀಪುರದಲ್ಲಿ ಸಫಾರಿಯನ್ನು ಬಂದ್ ಆಗಿರಲಿದೆ.

ಹೌದು…, ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಸಫಾರಿ ಕೇಂದ್ರವಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸೆ.20 ರಂದು ಬಂಡೀಪುರ ಸಫಾರಿ ಬಂದ್ ಮಾಡಲಾಗುತ್ತಿದೆ ಎಂದು ಬಂಡೀಪುರ ಸಿಎಫ್ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಬಂಡೀಪುರದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದಲ್ಲಿ ಅರಣ್ಯ ಇಲಾಖೆ ಮುಂಚೂಣಿ ಸಿಬ್ಬಂದಿ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಬಂಡೀಪುರ ಅರಣ್ಯ ವ್ಯಾಪ್ತಿಯ  ಅಧಿಕಾರಿ ಹಾಗೂ ಸಿಬ್ಬಂದಿ ಕುಟುಂಬಸ್ಥರಿಗೆ ವಿಶೇಷ ಔತಣಕೂಟ ಏರ್ಪಡಿಸಿರುವುದರಿಂದ ಸಫಾರಿ ಬಂದ್ ಮಾಡುವುದಾಗಿ ರಮೇಶ್ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ