ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ: ವಿರೋಧಿಸಿದಕ್ಕೆ ಪತ್ನಿಯ ತಲೆ ಕಡಿದ ಪತಿ - Mahanayaka
9:41 PM Wednesday 20 - August 2025

ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ: ವಿರೋಧಿಸಿದಕ್ಕೆ ಪತ್ನಿಯ ತಲೆ ಕಡಿದ ಪತಿ

crime news
27/02/2022


Provided by

ಪಾಟ್ನಾ: ಅತ್ತಿಗೆಯೊಂದಿಗಿನ ಅಕ್ರಮ ಸಂಬಂಧವನ್ನು ವಿರೋಧಿಸಿದ ಪತ್ನಿಯ ತಲೆ ಕಡಿದು ಕೊಲೆ ಮಡಿ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದಿರುವ ಘಟನೆ ಬಿಹಾರದ ಗೋಪಾಲ್‌ ಗಂಜ್ ಜಿಲ್ಲೆಯ ಮಿರ್‌ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂಜು ದೇವಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ವಿಜಯ್ ಗೊಂಡ್ ಅವರನ್ನು ಸಂಜು ದೇವಿ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಪತಿಯು ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಸಂಜು ಆಗಾಗ್ಗೆ ವಿರೋಧಿಸುತ್ತಿದ್ದಳು. ಇದರಿಂದ ದಿನವೂ ಪತ್ನಿ ಸಂಜುಗೆ ಥಳಿಸುತ್ತಿದ್ದ. ಇದರಿಂದ ಕೋಪಗೊಂಡ ಸಂಜು ತನ್ನ ತಾಯಿಯ ಮನೆಗೆ ಹೋಗಿದ್ದಳು. ಅದೇ ವೇಳೆ ಪತಿಯನ್ನು ಕರೆಸಿಕೊಂಡ ಸಂಜು, ಅತ್ತೆ ಮನೆಯಿಂದ ಅತ್ತಿಗೆ ಮನೆಗೆ ಬಂದಿದ್ದಳು. ಅದೇ ರಾತ್ರಿ ಚಾಪಕಲ್ ಬಳಿ ನೀರು ತರಲು ಹೋದ ಸಂಜು ದೇವಿಯ ತಲೆ ಕಡಿದು ಪತಿ ವಿಜಯ್‌ ಗೊಂಡ್‌ ಕೊಲೆ ಮಾಡಿ ನಂತರ ಕೊಲೆಗಾರ ಸಾಕ್ಷ್ಯ ನಾಶಪಡಿಸಲು ಪತ್ನಿಯ ಶವವನ್ನು ಹರಿತವಾದ ಆಯುಧದಿಂದ ಹಲವಾರು ತುಂಡುಗಳನ್ನಾಗಿ ಮಾಡಿ ಎಸೆದಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಪೋಷಕರಿಗೆ ಮಾಹಿತಿ ಸಿಕ್ಕಿತ್ತು. ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಮಿರ್‌ಗಂಜ್ ಪೊಲೀಸ್ ಠಾಣಾ ಪೊಲೀಸರು ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬ್ಯಾಂಕ್ ಆಫ್ ಬರೋಡಾ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಕೊಳ್ಳಿ ಈ ಲಾಭಗಳನ್ನು ಪಡೆಯಿರಿ

ಚಿಕ್ಕಬಳ್ಳಾಪುರದಲ್ಲಿ ಭಾರೀ ಸ್ಫೋಟ: ಮನೆ ಸಂಪೂರ್ಣ ಛಿದ್ರ; ದಂಪತಿಗೆ ಗಂಭೀರ ಗಾಯ

ರೈತನ ಮೇಲೆ ಕರಡಿ ದಾಳಿ: ಅರಣ್ಯಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಹರ್ಷ ಸಾವಿನ ಬಳಿಕದ ಗಲಭೆಗೆ ಈಶ್ವರಪ್ಪನೇ ಕಾರಣ: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

ದೇಶದ ರಕ್ಷಣೆಗೆ ಬಂದೂಕು ಹಿಡಿದ ಉಕ್ರೇನ್ ಅಧ್ಯಕ್ಷ

ಇತ್ತೀಚಿನ ಸುದ್ದಿ