ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಗೆ ಹೃದಯಾಘಾತ - Mahanayaka

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಗೆ ಹೃದಯಾಘಾತ

ricky ponting
02/12/2022


Provided by

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಕಾಮೆಂಟರಿ ಮಾಡುತ್ತಿದ್ದ ವೇಳೆ ಎದೆ ನೋವಿನಿಂದ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವರದಿಗಳ ಪ್ರಕಾರ ರಿಕಿ ಪಾಂಟಿಂಗ್ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗಿದೆ. ರಿಕಿ ಪಾಂಟಿಂಗ್ ತೀವ್ರ ಅಸ್ವಸ್ಥಗೊಂಡ ನಂತರ ಊಟದ ಸಮಯದಲ್ಲಿ ಪರ್ತ್ ಕ್ರೀಡಾಂಗಣದಿಂದ ಆಸ್ಪತ್ರೆಗೆ ತೆರಳಿದ್ದಾರೆ.

ಸೆವೆನ್ ನೆಟ್‌ ವರ್ಕ್‌ ಗೆ ಕಾಮೆಂಟರಿ ನೀಡುತ್ತಿದ್ದ ರಿಕಿ ಪಾಂಟಿಂಗ್ ಅಸ್ವಸ್ಥರಾಗಿರುವ ಕಾರಣ ಇಂದಿನ ಪ್ರಸಾರದ ಉಳಿದ ಭಾಗಕ್ಕೆ ವಿವರಣೆಯನ್ನು ರಿಕಿ ಪಾಂಟಿಂಗ್ ಅವರು ನೀಡುವುದಿಲ್ಲ ಎಂದು ಚಾನೆಲ್ 7 ರ ವಕ್ತಾರರು ತಿಳಿಸಿದ್ದಾರೆ.

1999 ರಿಂದ 2007 ರವರೆಗೆ ಆಸೀಸ್‌ನ ಸತತ ಮೂರು ವಿಶ್ವ ಕಪ್ ವಿಜಯದ ಭಾಗವಾಗಿದ್ದರು. 2006 ಮತ್ತು 2009 ರ ಆವೃತ್ತಿಗಳಲ್ಲಿ ತಂಡವನ್ನು ಎರಡು ಬ್ಯಾಕ್-ಟು-ಬ್ಯಾಕ್ ಚಾಂಪಿಯನ್ಸ್ ಟ್ರೋಫಿ ವಿಜಯಗಳನ್ನು ಮುನ್ನಡೆಸಿದ್ದಾರೆ. ಪ್ರಸ್ತುತ ಐಪಿಎಲ್‌ ನಲ್ಲಿ ದೆಹಲಿ ಕ್ಯಾಪಿಟಲ್ಸ್‌ ಅವರ ಮುಖ್ಯ ಕೋಚ್‌ ಆಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ