ಅಫ್ಘಾನಿಸ್ತಾನಕ್ಕೆ ಸೋಲುಣಿಸಿದ ಕಾಂಗರೂ ಪಡೆ: ಸೆಮಿಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ - Mahanayaka
8:06 AM Saturday 18 - October 2025

ಅಫ್ಘಾನಿಸ್ತಾನಕ್ಕೆ ಸೋಲುಣಿಸಿದ ಕಾಂಗರೂ ಪಡೆ: ಸೆಮಿಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

07/11/2023

ಮುಂಬೈ ನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್‌ 2023ರ 39ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಆಸ್ಟ್ರೇಲಿಯಾವು ರೋಚಕ ಗೆಲುವು ಸಾಧಿಸಿದೆ.


Provided by

ಗಲೆನ್‌ ಮ್ಯಾಕ್ಸ್‌ವೆಲ್‌ 128 ಎಸೆತಗಳಲ್ಲಿ 201 ರನ್‌ ಸಾಧಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಮ್ಯಾಕ್ಸ್‌ವೆಲ್‌ ಡಬಲ್‌ ಸೆಂಚೂರಿ ಕ್ರಿಕೆಟ್‌ ಪ್ರಿಯರಿಗೆ ಹಬ್ಬದ ವಾತಾವರಣ ನೀಡಿತು. 21 ಬೌಂಡರಿ, 10 ಸಿಕ್ಸರ್‌ ಬಾರಿಸಿ ತಂಡದ ಮೊತ್ತವನ್ನು ಏರಿಸಿದರು. 7 ವಿಕೆಟ್‌ ನಷ್ಟಕ್ಕೆ 91 ರನ್‌ಗಳಿಸಿ ಸೋಲಿನ ಭೀತಿ ಎದುರಿಸುತ್ತಿದ್ದ ತಂಡಕ್ಕೆ ಮ್ಯಾಕ್ಸ್‌ವೆಲ್‌ ಮತ್ತು ಪ್ಯಾಟ್‌ ಕಮಿನ್ಸ್‌ ಜೊತೆಯಾಟ ಅಫ್ಘನ್‌ನ್ನರು ನೀಡಿದ ಗುರಿ ಮುಟ್ಟಲು ಸಹಕಾರಿಯಾಯಿತು.

ಟಾಸ್‌ ಗೆದ್ದ ಅಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್‌ ಆಯ್ದು ಕೊಂಡಿದ್ದು 5 ವಿಕೆಟ್‌ ಕಳೆದುಕೊಂಡು ಕಾಂಗರೂ ಪಡೆಗೆ 292 ರನ್‌ಗಳ ಗುರಿ ನೀಡಿತು. ಅಫ್ಗಾನ್‌ ಪರ ಆಟಗಾರ ಇಬ್ರಾಹಿಂ ಜರ್ದಾನ್‌ 129 ರನ್‌ಗಳಿಸಿ ಅಜೇಯ ಶತಕದ ಮೂಲಕ ತಂಡಕ್ಕೆ ಉತ್ತಮ ರನ್‌ ಕಲೆಹಾಕಿದರು. ಅಫ್ಘಾನ್‌ ತಂಡ ಆಸ್ಟ್ರೇಲಿಯಾಗೆ ಭರ್ಜರಿ ಟಫ್‌ ಕಾಂಪಿಟೇಶನ್‌ ನೀಡಿದ್ದು ಭರ್ಜರಿ ಪ್ರದರ್ಶನದೊಂದಿಗೆ 7 ವಿಕೆಟ್‌ ನಷ್ಟಕ್ಕೆ 293 ರನ್‌ ಗಳಿಸಿ ಆಸ್ಟ್ರೇಲಿಯಾ ಸೆಮಿಫೈನಲ್‌ ಪ್ರವೇಶಿಸಿದೆ.

ಇತ್ತೀಚಿನ ಸುದ್ದಿ