ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್​ ವಾರ್ನ್ ನಿಧನ - Mahanayaka
12:17 PM Thursday 11 - December 2025

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್​ ವಾರ್ನ್ ನಿಧನ

warne
05/03/2022

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ, ವಿಶ್ವದ ಶ್ರೇಷ್ಠ ಲೆಗ್‌ ಸ್ಪಿನ್ನರ್‌ ಎಂದೇ ಮಾನ್ಯರಾದ ಶೇನ್ ವಾರ್ನ್ ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶೇನ್ ವಾರ್ನ್ (52) ಹೃದಯಾಘಾತದಿಂದ ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ​​ ನಿಧನರಾಗಿದ್ದಾರೆಂದು ಅವರ ಮ್ಯಾನೇಜ್‌ಮೆಂಟ್‌ ಕಂಪೆನಿ ತಿಳಿಸಿದೆ.

ಶೇನ್​ ಅವರಿಗೆ ತಮ್ಮ ವಿಲ್ಲಾದಲ್ಲಿದಾಗ ಹೃದಯಾಘಾತವಾಗಿದ್ದು, ಕೂಡಲೇ ವೈದ್ಯಕೀಯ ನೆರವು ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ತಮ್ಮ ವೃತ್ತಿಜೀವನದಲ್ಲಿ 145 ಟೆಸ್ಟ್ ಪಂದ್ಯಗಳನ್ನು ಆಡಿರುವ ಶೇನ್ ವಾರ್ನ್, 708 ವಿಕೆಟ್ ಪಡೆದಿದ್ದಾರೆ. 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. ಹಲವು ದಾಖಲೆಗಳು ಶೇನ್ ವಾರ್ನ್ ಹೆಸರಿನಲ್ಲಿವೆ. ಇದೀಗ ಶೇನ್​ ವಾರ್ನ್​​ ಹಠಾತ್​ ನಿಧನಕ್ಕೆ ಭಾರತೀಯ ಕ್ರಿಕೆಟ್​​ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಳಿಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿತ:10ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಶಂಕೆ

ಮಸೀದಿಯಲ್ಲಿ ನಮಾಜ್ ವೇಳೆ ಬಾಂಬ್ ಸ್ಫೋಟ: 30 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ರೈತರಿಗೆ ಸಿಹಿ ಸುದ್ದಿ ನೀಡಿದ ಸಿಎಂ ಬೊಮ್ಮಾಯಿ

ಇತ್ತೀಚಿನ ಸುದ್ದಿ