ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗ ಮುಟ್ಟಿ ಯುವತಿಗೆ ಕಿರುಕುಳ ನೀಡಿದ ಆಟೋ ಚಾಲಕ ಅರೆಸ್ಟ್! - Mahanayaka
7:28 PM Wednesday 17 - September 2025

ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗ ಮುಟ್ಟಿ ಯುವತಿಗೆ ಕಿರುಕುಳ ನೀಡಿದ ಆಟೋ ಚಾಲಕ ಅರೆಸ್ಟ್!

auto releted image
17/09/2025

ಬೆಂಗಳೂರು:  ಬ್ಯಾಗ್ ಇಡುವ ನೆಪದಲ್ಲಿ ಆಟೋ ಚಾಲಕನೊಬ್ಬ ಯುವತಿಯ ಖಾಸಗಿ ಅಂಗ ಮುಟ್ಟಿ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಜೆಪಿ ನಗರದ 7ನೇ ಹಂತದಲ್ಲಿ ನಡೆದಿದೆ.


Provided by

ಜೆಪಿ ನಗರದ ಏಳನೇ ಸ್ಟೇಜ್​ ನಿಂದ ಆಟೋ ಬುಕ್ ಮಾಡಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಆಟೋ ಚಾಲಕ ಒಳಗೆ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಮೈ ಮುಟ್ಟಿದ್ದಾನೆ. ಅಲ್ಲದೇ ನಿಮಗೆ ಜ್ವರ ಬಂದಿದ್ಯಾ ಎಂದು ನಾಟಕ ಮಾಡುತ್ತ ಆಕೆಯ ಹಣೆ ಮುಟ್ಟಿ ಬಳಿಕ ಏಕಾಏಕಿ ಖಾಸಗಿ ಅಂಗಕ್ಕೆ ಕೈ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಆಟೋ ಚಾಲಕ ಹನುಮಂತಪ್ಪ ಹೆಚ್ ತಳವಾರ ಎಂಬಾತನನ್ನ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮೈಮೇಲೆ ಕೈ ಹಾಕಿರುವುದೇ ಅಲ್ಲದೇ, ನೀನು ಸಿನಿಮಾ ಹಿರೋಯಿನ್ ತರಾ ಇದೀಯಾ ಎಂದು ಹೇಳಿದ್ದಲ್ಲದೇ ಜ್ವರ ಬಂದಿದೆಯಾ ಎಂದು ಪರೀಕ್ಷಿಸುವಂತೆ ಹಣೆ ಮುಟ್ಟಿ ಬಳಿಕ ಖಾಸಗಿ ಅಂಗ ಮುಟ್ಟಿ ಕಿರುಕುಳ ನೀಡಿದ್ದಾನೆ. ಇದರಿಂದ ಆಘಾತಕ್ಕೊಳಗಾದ ನೊಂದ ಯುವತಿ ತಕ್ಷಣವೇ ಆಟೋದಿಂದ ಜಿಗಿದು, ಓಡಿ ಹೋಗಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಕೆಲಸ ಮಾಡುತ್ತಿದ್ದ ಕ್ಯಾಬ್ ಕಂಪೆನಿಗೂ ಈ ಬಗ್ಗೆ ಮಾಹಿತಿ ನೀಡಿ ಆತನ ಲೈಸೆನ್ಸ್  ವಿರುದ್ಧ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ