ಅಯ್ಯಪ್ಪ  ಮಾಲಾಧಾರಿ ಬಾಲಕನನ್ನು ರಸ್ತೆ ದಾಟಿಸಿದ ಮುಸ್ಲಿಮ್ ವೃದ್ಧ ! - Mahanayaka
12:07 AM Wednesday 20 - August 2025

ಅಯ್ಯಪ್ಪ  ಮಾಲಾಧಾರಿ ಬಾಲಕನನ್ನು ರಸ್ತೆ ದಾಟಿಸಿದ ಮುಸ್ಲಿಮ್ ವೃದ್ಧ !

dakshinakannada
08/01/2023


Provided by

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕಲ್ಲುಗುಂಡಿಯಲ್ಲಿ ಅಯ್ಯಪ್ಪ ಮಾಲಾಧಾರಿ ಬಾಲಕನೊಬ್ಬನನ್ನು ವೃದ್ಧರೋರ್ವರು ಕೈ ಹಿಡಿದು ರಸ್ತೆ ದಾಟಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದು ಸೌಹಾರ್ದತೆಯನ್ನು ಎತ್ತಿ ಹಿಡಿದಿದೆ.

ಕಲ್ಲುಗುಂಡಿ ಸಮೀಪ ಅಯ್ಯಪ್ಪ ಮಾಲಾಧಾರಿಯಾದ ಸೋನು ಎಂಬ ಬಾಲಕ ವಾಹನ ಸಂಚಾರವಿದ್ದ ರಸ್ತೆ ದಾಟಲು ಕಷ್ಟಪಡುತ್ತಿದ್ದ. ಇದನ್ನು ಗಮನಿಸಿದ ಪರಿಚಿತರಾದ ಇಬ್ರಾಹೀಂ ಮೈಲಿಕಲ್ಲು ಎಂಬುವವರು ಬಾಲಕನನ್ನು ಸಮೀಪದ ಹಣ್ಣಿನ ಅಂಗಡಿ ಕರೆದೊಯ್ದು ಹಣ್ಣು ನೀಡಿ ಉಪಚರಿಸಿ ರಸ್ತೆ ದಾಟಿಸಿ ಬಿಟ್ಟಿದ್ದಾರೆ.

ಈ ವೇಳೆ ಯಾರೋ ಕ್ಕಿಕ್ಕಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಸೌಹಾರ್ದ ಸಾರುವ ಚಿತ್ರ’ ಎಂಬ ಅಡಿಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ