ಬಿ.ಆರ್.ಸೇವಾಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ, ಸಹಾಯಧನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಬ್ರಹ್ಮಾವರ: ಬಿ.ಆರ್.ಸೇವಾಟ್ರಸ್ಟ್ ಅಲ್ತಾರು ಇವರ ವತಿಯಿಂದ ಜ. 04ರಂದು 3ನೇ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಧನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಾಹೇಬರಕಟ್ಟೆ ಸ್ವಾಗತ್ ಹಾಲ್ ನಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ದಿನಕರ್ ಶೆಟ್ಟಿ ಬಸ್ರೂರು ನಿವೃತ್ತ ಮುಖ್ಯೋಪಾಧ್ಯಾಯರು ಬಸ್ರೂರು ಇವರು ಮಾತನಾಡಿ “ಶಿಕ್ಷಣವೇ ಶಕ್ತಿ” ಮೌಲ್ಯಯುತ ಶಿಕ್ಷಣದ ಮಹತ್ವವನ್ನು ಮಕ್ಕಳಿಗೆ ತಿಳಿಯಪಡಿಸಿದರು.
ಈ ಕಾರ್ಯಕ್ರಮ ಉದ್ಘಾಟಿಸಿದ ನಿರಂಜನ್ ಹೆಗ್ಡೆ ಅಲ್ತಾರು ಇಂತಹ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸಾಧಕರಾದ ಮಂಜುನಾಥ ಮಂದಾರ್ತಿ, ರಮೇಶ ಮಂದಾರ್ತಿ, ಶಿವಾನಿ ಅಂಡಾರು, ಪ್ರಣೀತಾ ಸಾಹೇಬರಕಟ್ಟೆ, ಸಂಜನಾ ನಾಯ್ಕ ಅಲ್ತಾರು, ವರ್ಷಾ ಶಿರೂರು ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದಯ್ ಕುಮಾರ್ ತಲ್ಲೂರು, ಪ್ರದೀಪ್ ಬಲ್ಲಾಳ್, ಸ್ವರ್ಣ ಕಾಮತ್ ಉಡುಪಿ, ವಿಜಯ್ ಕುಮಾರ್ ಶೆಟ್ಟಿ ಆವರ್ಸೆ,ರಘುರಾಮ್ ಶೆಟ್ಟಿ ಅಲ್ತಾರು, ಅಮೃತ್ ಪೂಜಾರಿ ಯಡ್ತಾಡಿ, ಶಶಿ ಬಳ್ಕೂರು, ರಾಘು ಶಿರೂರು ಮುಂತಾದ ಗಣ್ಯರು ಭಾಗವಹಿಸಿದರು ,ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಬಿ.ಆರ್ ಸೇವಾಟ್ರಸ್ಟ್ ಅಲ್ತಾರು ಇದರ ಅಧ್ಯಕ್ಷರಾಗಿರುವ ಚಂದ್ರ ಅಲ್ತಾರ್ ವಹಿಸಿ ಈ ಸಂಸ್ಥೆಯ ಮೇಲಿನ ಅಭಿಮಾನಕ್ಕೆ ಎಲ್ಲರಿಗೂ ಧನ್ಯವಾದ ತಿಳಿಸಿ ಇನ್ನೂ ಹೆಚ್ಚಿನ ಬೆಂಬಲ ನೀಡಬೇಕಾಗಿ ಕೋರಿಕೊಂಡರು, ಪೂರ್ವಿಕ ಅಲ್ತಾರು ಸ್ವಾಗತಿಸಿದರು, ಸತೀಶ್ ಸೂರ್ಗೋಳಿ ಪ್ರಸ್ತಾವನೆಗೈದರು, ರಕ್ಷಿತಾ ಅಂಡಾರು ನಿರೂಪಿಸಿ ವಂದಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























