ಅದೇ ವಿಡಿಯೋದಲ್ಲಿ ಬಿ.ವೈ.ವಿಜಯೇಂದ್ರ ಬಗ್ಗೆಯೂ ಮಾತನಾಡಿದ್ರಂತೆ ಸಲೀಂ | ವಿಡಿಯೋ ಕಟ್ ಮಾಡಿ ತೋರಿಸಲಾಗಿದೆ ಎಂಬ ಆರೋಪ - Mahanayaka
6:26 PM Wednesday 27 - August 2025

ಅದೇ ವಿಡಿಯೋದಲ್ಲಿ ಬಿ.ವೈ.ವಿಜಯೇಂದ್ರ ಬಗ್ಗೆಯೂ ಮಾತನಾಡಿದ್ರಂತೆ ಸಲೀಂ | ವಿಡಿಯೋ ಕಟ್ ಮಾಡಿ ತೋರಿಸಲಾಗಿದೆ ಎಂಬ ಆರೋಪ

vijayendra
14/10/2021


Provided by

ಬೆಂಗಳೂರು: ಡಿ.ಕೆ.ಶಿವಕುಮಾರ್ ಬಗ್ಗೆ ಕಲೆಕ್ಷನ್ ಗಿರಾಕಿ ಎಂಬ ಹೇಳಿಕೆ ನೀಡಿ ಉಚ್ಛಾಟನೆಗೊಳಗಾಗಿರುವ ಸಲೀಂ ಇದೀಗ ಘಟನೆಯ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನೀರಾವರಿ ಇಲಾಖೆಯಲ್ಲಿ ನಡೆದ ನೂರಾರು ಕೋಟಿ ಅವ್ಯವಹಾರದ ಬಗ್ಗೆ ಮಾತನಾಡುತ್ತಿದ್ದೆವು. ಆ ವಿಡಿಯೋ ಇನ್ನೂ ಉದ್ದ ಇದೆ. ಆದರೆ ಅದನ್ನು ಕಟ್ ಮಾಡಿ ತೋರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅದೇ ಸಂದರ್ಭದಲ್ಲಿ  ನಾನು ಬಿ.ವೈ. ವಿಜಯೇಂದ್ರ ಅವರ ಬಗ್ಗೆ ಮಾತನಾಡಿದ್ದೆ. ಇದೆಲ್ಲವೂ ನಾನಾಡಿದ ಮಾತಿನ ಮುಂದಿನ ಭಾಗದಲ್ಲಿ ಇದೆ. ಆದರೆ ಅರ್ಧ ಮಾತ್ರ ತೋರಿಸಲಾಗಿದೆ ಎಂದು ಸಲೀಂ ಆರೋಪಿಸಿದ್ದಾರೆ. ತೊದಲು ಮಾತನಾಡುತ್ತಾರೆ ಎಂಬ ವೈರಲ್ ವಿಡಿಯೋ ಬಗ್ಗೆ ಚರ್ಚೆ ಮಾಡಿದ್ದೇನೆ ಬಿಟ್ಟರೆ ಡಿಕೆಶಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಈ ಘಟನೆಯಿಂದ ನನಗೆ ಡಿ.ಕೆ.ಶಿವಕುಮಾರ್ ಅವರಿಗೆ ಮುಖ ತೋರಿಸಲು ಮುಜುಗರವಾಗುತ್ತಿದೆ ಎಂದು ಅವರು ಹೇಳಿದರು.

ಡಿ.ಕೆ.ಶಿವಕುಮಾರ್ ನನಗೆ ಗಾಡ್ ಫಾದರ್, ನನ್ನ ಉಸಿರು ಇರುವವರೆಗೂ ನಾನು ಕಾಂಗ್ರೆಸ್ ನಲ್ಲಿರುತ್ತೇನೆ. ನನ್ನನ್ನು ಉಚ್ಛಾಟನೆ ಮಾಡಿರುವುದು ನೋವು ತಂದಿದೆ ಎಂದು ಅವರು ಇದೇ ಸಂದರ್ಭದದಲ್ಲಿ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಕೋಟಿಗೊಬ್ಬ-3: ಬಿಡುಗಡೆ ದಿನವೇ ಸುದೀಪ್ ಅಭಿಮಾನಿಗಳಿಗೆ ಭಾರೀ ನಿರಾಸೆ

ಕಂತ್ರಿ ನಾಯಿಗಳು ನೀವು, ಹೊಟ್ಟೆಗೆ ಏನ್ ತಿಂತೀರಾ? | ಉಗ್ರಪ್ಪಗೆ ಉಗ್ರರೂಪ ತೋರಿಸಿದ ಕಾಂಗ್ರೆಸ್ ಕಾರ್ಯಕರ್ತೆ

ಬಿಜೆಪಿಯ ಭ್ರಷ್ಟಾಚಾರವನ್ನು ಶಾಸಕರೊಬ್ಬರು ಮಂಚದ ಮೇಲೆಯೂ ಕನವರಿಸಿದ್ದರು | ಬಿಜೆಪಿಗೆ ಕಾಂಗ್ರೆಸ್ ತಿರುಗೇಟು

ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಿಎಂ ಹೇಳಿಕೆ ಕಾನೂನು ಸುವ್ಯವಸ್ಥೆಯನ್ನು ಗಂಡಾಂತರಕ್ಕೆ ತಳ್ಳಲಿದೆ | SDPI

“ಸಾವರ್ಕರ್ ರಾಷ್ಟ್ರಪಿತ” ಎಂದು ಬಿಜೆಪಿ ಶೀಘ್ರದಲ್ಲೇ ಘೋಷಿಸುತ್ತದೆ: ಓವೈಸಿ ಹೇಳಿಕೆ

ಡಿಕೆಶಿ ಕುಡುಕರಂತೆ ತೊದಲುತ್ತಾರೆ, ಕಲೆಕ್ಷನ್ ಗಿರಾಕಿ | ಮೈಕ್ ಆನ್ ಆಗಿರೋದು ತಿಳಿಯದೇ ಮಾತನಾಡಿ ಕಾಂಗ್ರೆಸ್ ನಾಯಕರ ಯಡವಟ್ಟು!

ಇತ್ತೀಚಿನ ಸುದ್ದಿ