ಚಿಕಿತ್ಸೆ ನೀಡುವ ನೆಪದಲ್ಲಿ ಖಾಸಗಿ ಭಾಗ ಮುಟ್ಟಿದ ಬಾಬಾ!: ಯುವತಿ ವಿರೋಧಿಸಿದ್ರು ಸುಮ್ಮನಿದ್ದ ತಂದೆ -ತಾಯಿ - Mahanayaka
2:58 PM Friday 12 - September 2025

ಚಿಕಿತ್ಸೆ ನೀಡುವ ನೆಪದಲ್ಲಿ ಖಾಸಗಿ ಭಾಗ ಮುಟ್ಟಿದ ಬಾಬಾ!: ಯುವತಿ ವಿರೋಧಿಸಿದ್ರು ಸುಮ್ಮನಿದ್ದ ತಂದೆ –ತಾಯಿ

baba
27/08/2024

ಕಾಯಿಲೆ ವಾಸಿ ಮಾಡುವ ನೆಪದಲ್ಲಿ ಯುವತಿಯ ಮೈಮುಟ್ಟಿ ಬ್ಯಾಡ್ ಟಚ್ ಮಾಡಿದ ಬಾಬಾನಿಗೆ “ನನ್ನ ಮೈ ಮುಟ್ಟ ಬೇಡಿ” ಎಂದು ವಿರೋಧಿಸಿದ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Provided by

Nehr_who? ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಬಾಬಾ ಚಿಕಿತ್ಸೆ ನೀಡುವ ನೆಪದಲ್ಲಿ ಯುವತಿಯ ಎದೆ ಹಾಗೂ ಸೊಂಟದ ಭಾಗಗಳನ್ನು ಮುಟ್ಟುತ್ತಾನೆ. ಆ ವೇಳೆ ಯುವತಿ ಅದನ್ನು ವಿರೋಧಿಸುತ್ತಾಳೆ.

ಆದ್ರೆ ದುರಾದೃಷ್ಟ ಏನಂದ್ರೆ ತನ್ನ ಮಗಳ ಮೈಯನ್ನು ತನ್ನೆದುರೇ ಬಾಬು ಮುಟ್ಟುತ್ತಿದ್ದರೂ, ಪಕ್ಕದಲ್ಲೇ ಕುಳಿತಿದ್ದ ಪೋಷಕರು ಬಾಬಾನನ್ನು ಭಕ್ತಿ ಭಾವದಿಂದ ನೋಡುತ್ತಾ, ಆತನಿಗೆ ಬೆಂಬಲಿಸುತ್ತಿರುವ ದೃಶ್ಯ ಕಂಡು ಬಂತು.

ಪೋಷಕರ ಎದುರೇ ಮಗಳ ಮೈಮುಟ್ಟಿದರೂ ಅವರು ಹೇಗೆ ಸಹಿಸಿಕೊಂಡು ನೋಡುತ್ತಿದ್ದಾರೆ ಅಂತ ಈ ವಿಡಿಯೋ ನೋಡಿದ ನೆಟ್ಟಿಗರು ಪ್ರಶ್ನಿಸಿದ್ದಾರೆ. ಆ ಬಾಲಕಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಅಂದ್ರೆ ಏನು ಎನ್ನುವುದರ ಅರಿವಿದೆ. ಬಾಬಾ ಬ್ಯಾಡ್ ಟಚ್ ಮಾಡುತ್ತಿದ್ದಾನೆ ಎಂದು ಆಕೆ ಹೇಳಿದರೂ ಪೋಷಕರು ಸುಮ್ಮನಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ