ಬಡ ಅರ್ಚಕರಿಗೆ ಜೀವನ ಕಷ್ಟವಾಗಿದೆ, ಪರಿಹಾರ ನೀಡಿ | ಬ್ರಾಹ್ಮಣರ ನಿಗಮ ಒತ್ತಾಯ - Mahanayaka

ಬಡ ಅರ್ಚಕರಿಗೆ ಜೀವನ ಕಷ್ಟವಾಗಿದೆ, ಪರಿಹಾರ ನೀಡಿ | ಬ್ರಾಹ್ಮಣರ ನಿಗಮ ಒತ್ತಾಯ

h s sacchidananda
20/05/2021

ಬೆಂಗಳೂರು: ಲಾಕ್ ಡೌನ್ ನಿಂದ ಬಡ ಅರ್ಚಕರಿಗೆ ಜೀವನ ಕಷ್ಟವಾಗಿದೆ ಹೀಗಾಗಿ ಅರ್ಚಕರಿಗೆ ಪರಿಹಾರ ಘೋಷಿಸುವಂತೆ ಬ್ರಾಹ್ಮಣರ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದ ಸಿಎಂಗೆ ಮನವಿ ಮಾಡಿದ್ದಾರೆ.

ಇಂದು ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿದ ಬಳಿಕ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು. ಲಾಕ್ ಡೌನ್ ನಿಂದ ಬಡ ಅರ್ಚಕರ ಜೀವನ ಕಷ್ಟವಾಗಿದೆ. ಯಾವುದೇ ಸಮಾರಂಭಗಳು ಕೂಡ ನಡೆಯುತ್ತಿಲ್ಲ. ಹೀಗಾಗಿ ಅವರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.

ಸಿಎಂ ಕೊವಿಡ್ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಅರ್ಚಕರು, ಪೂಜಾರಿಗಳಿಗೆ ಪರಿಹಾರ ಘೋಷಿಸಿಲ್ಲ. ಬಡ ಅರ್ಚಕರಿಗೆ ಜೀವನ ಸಾಗಿಸುವುದು ಕಷ್ಟವಾಗಿದೆ. ಹಾಗಾಗಿ ಪರಿಹಾರ ನೀಡಿ ಎಂದು ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ