ಬಡ ಕುಟುಂಬಕ್ಕೆ ಆಸರೆಯಾದ ಬಿಜೆಪಿ ನಾಯಕ ರಾಮಲಿಂಗಪ್ಪ  - Mahanayaka
9:23 AM Wednesday 20 - August 2025

ಬಡ ಕುಟುಂಬಕ್ಕೆ ಆಸರೆಯಾದ ಬಿಜೆಪಿ ನಾಯಕ ರಾಮಲಿಂಗಪ್ಪ 

bjp ramalingappa
21/06/2021


Provided by

ಚಿಕ್ಕಬಳ್ಳಾಪುರ : ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ  ದೇವರಾಜಪಲ್ಲಿ ಗ್ರಾಮದ ಬೈರನ್ನಗಾರಿಪಲ್ಲಿ ಗ್ರಾಮದ ವಾಸಿ ವೆಂಕಟೇಶ್ ಎಂಬುವರು ಆಟೋ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಅವರಿಗೆ ಬೆನ್ನು ಮತ್ತು ಕುತ್ತಿಗೆಯ ಭಾಗದಲ್ಲಿ ತೀವ್ರ ಪೆಟ್ಟಾಗಿ ಆಪರೇಷನ್ ಮಾಡಲು ವೈದ್ಯರು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಆಪರೇಷನ್ ಗಾಗಿ ಸುಮಾರು 200,000 (ಎರಡು ಲಕ್ಷ) ವೆಚ್ಚ ಆಗುವುದಾಗಿ ವೈದ್ಯರು ಸೂಚಿಸಿದಾಗ,

ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಮಲಿಂಗಪ್ಪ ನವರ ಸಹಾಯ ಹಾಗೂ ಸಹಕಾರದಿಂದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಭರವಸೆ ನೀಡಿದರು. ನುಡಿದಂತೆ ಅವರು ಆ ವೆಚ್ಚವನ್ನು ಭರಿಸಿ ವೆಂಕಟೇಶ್ ರವರಿಗೆ ಆಪರೇಷನ್ ಮಾಡಿಸಿದ್ದಾರೆ,

ಹಾಗೂ ಅದು ಸಫಲವಾಗಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಸಂದರ್ಭದಲ್ಲಿ ಕಷ್ಟ ಕಾಲದಲ್ಲಿ ಆ ಕುಟುಂಬದ ಕೈ ಹಿಡಿದ ರಾಮಲಿಂಗಪ್ಪ  ನವರಿಗೆ ನೊಂದ ಆ ಬಡ ಕುಟುಂಬ ಹಾಗೂ ಸಮಸ್ತ ದೇವರಾಜಪಲ್ಲಿ ಹಾಗೂ ಭೈರನ್ನಗಾರಿಪಲ್ಲಿ ಗ್ರಾಮಸ್ಥರ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ಅರುಣ್ ರೆಬೆಲ್ ಭಾಯ್ ನಗರ ಮಾಧ್ಯಮ ಸಂಚಾಲಕರು ಭಾ.ಜ.ಪಾ, ಚಿಕ್ಕಬಳ್ಳಾಪುರ ಜಿಲ್ಲೆ ಇವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ