ಬಡವರ ಪರಿಹಾರ ಸಾಮಗ್ರಿ ಕದ್ದ ಆರೋಪ | ಬಿಜೆಪಿ ನಾಯಕ ಹಾಗೂ ಸಹೋದರನ ವಿರುದ್ಧ ಎಫ್ ಐಆರ್ - Mahanayaka

ಬಡವರ ಪರಿಹಾರ ಸಾಮಗ್ರಿ ಕದ್ದ ಆರೋಪ | ಬಿಜೆಪಿ ನಾಯಕ ಹಾಗೂ ಸಹೋದರನ ವಿರುದ್ಧ ಎಫ್ ಐಆರ್

suvendu adhikari
06/06/2021

ಕಾಂತಿ:  ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೇಂದು ಅಧಿಕಾರಿ ವಿರುದ್ಧ ಪರಿಹಾರ ಸಾಮಗ್ರಿ ಕದ್ದ ಗಂಭೀರ ಆರೋಪ ಕೇಳಿ ಬಂದಿದ್ದು,   ಘಟನೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧವೂ ಎಫ್ ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.


Provided by

ಪಶ್ಚಿಮ ಬಂಗಾಳದ ಕಾಂತಿ ಪುರಸಭೆ ಆಡಳಿತ ಮಂಡಳಿ ಸದಸ್ಯ ರತ್ನಾದೀಪ್ ಮನ್ನಾ ಅವರ ದೂರಿನ ಹಿನ್ನೆಲೆಯಲ್ಲಿ ಸುವೇಂದು ಅಧಿಕಾರಿ ಮತ್ತವನ ಸಹೋದರನ ವಿರುದ್ಧ ಪ್ರಕರಣ ದಾಖಲಾಗಿದೆ.

ಸುವೇಂದು ಅಧಿಕಾರಿ ಹಾಗೂ ಸೌಮೇಂದು ಅಧಿಕಾರಿ ನಿರ್ದೇಶನದಂತೆ 2021 ಮೇ 29 ಮಧ್ಯಾಹ್ನ 12.30ಕ್ಕೆ ಪುರಸಭೆ ಕಚೇರಿ ಗೋಡೌನ್ ಅನ್ನು ಬಲವಂತವಾಗಿ ತೆರೆದು ಲಕ್ಷಾಂತರ ರೂಪಾಯಿ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಒಯ್ಯಲಾಗಿದೆ ಎಂದು ದೂರಲಾಗಿದೆ.

ಈ ಕಳ್ಳತನ ನಡೆಸಲು ಬಿಜೆಪಿ ನಾಯಕರು ಕೇಂದ್ರದ ಸಶಸ್ತ್ರ ಪಡೆಯ ನೆರವನ್ನು ಬಳಕೆ ಮಾಡಿದ್ದಾರೆ ಎಂಬ ಗಂಭೀರ ವಿಚಾರವನ್ನು ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇತ್ತೀಚಿನ ಸುದ್ದಿ