ಬಜಪೆ: ಪರಿವರ್ತನಾ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ - Mahanayaka

ಬಜಪೆ: ಪರಿವರ್ತನಾ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

pariwarthana
22/09/2024


Provided by

ಬಜಪೆ: ಪರಿವರ್ತನಾ ಗ್ರಾಮೀಣ ಸಹಕಾರ ಸಂಘ(ನಿ.), ಬಜಪೆ ಇದರ 2023–24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಬಜಪೆ ವಿಶ್ವಕರ್ಮ ಸಭಾಭವನದಲ್ಲಿ ಸಹಕಾರ ಸಂಘದ ಸ್ಥಾಪಕರೂ, ಅಧ್ಯಕ್ಷರು ಆದ ಕೃಷ್ಣಾನಂದ ಡಿ. ಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸ್ವಾತಿಯವರು 2023–24ನೇ ಸಾಲಿನ ವರದಿಯನ್ನು ವಾಚಿಸಿ, 3ನೇ ವರ್ಷದಲ್ಲಿ ಸಂಸ್ಥೆ ಲಾಭದಲ್ಲಿ ಮುನ್ನಡೆಯುತ್ತಿರುವುದನ್ನು ಸಭೆಗೆ ತಿಳಿಸಿದರು. ನಿರ್ದೇಶಕಿಯಾದ  ವೈಶಾಲಿಯವರು 2024–25ನೇ ಸಾಲಿನ ಅಂದಾಜು ಬಜೆಟನ್ನು ಮಂಡಿಸಿದರು.

ಸಂಘದ ಅಧ್ಯಕ್ಷರಾದ ಕೃಷ್ಣಾನಂದ ಡಿ.ಯವರು ಬಂದ ಲಾಭಾಂಶದಿಂದ ನಿಧಿಗಳಿಗೆ ಮೀಸಲಿಟ್ಟು ಸದಸ್ಯರಿಗೆ 3ನೇ ವರ್ಷದಲ್ಲಿಯೇ ಡಿವಿಡೆಂಟನ್ನು ಮತ್ತು ಸಿಬ್ಬಂದಿಗಳಿಗೆ ಬೋನಸನ್ನು ಘೋಷಿಸಿದರು.

ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಹಕಾರ ಸಂಘವು ಜನರಿಂದ ಜನರಿಗಾಗಿ ಅರ್ಥಾತ್,  ಕಟ್ಟಕಡೆಯ ವ್ಯಕ್ತಿಯ ಆರ್ಥಿಕ ಪರಿವರ್ತನೆಯೇ  ಸಂಸ್ಥೆಯ ಉದ್ಧೇಶ ಎಂದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಜಯಲಕ್ಷ್ಮೀ,  ನಿರ್ದೇಶಕರಾದ  ಹರೀಶ್ವರ್, ರುಕ್ಕಯ್ಯ ಅಮೀನ್, ಆಲ್ವಿನ್ ಡಿಸೋಜ, ಕಮಲಾಕ್ಷ ಬಜಾಲ್, ಪದ್ಮನಾಭ ಅಮೀನ್, ವೈಶಾಲಿ, ರೀಶಾ, ಉಷಾ, ಮಾಜಿ ಅಧ್ಯಕ್ಷರಾದ  ವಿಲಿಯಂ ಲೋಬೋ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಡಿಮೆ ಅವಧಿಯಲ್ಲಿ  ಪರಿವರ್ತನಾ ಸಹಕಾರ ಸಂಘ ಪ್ರವರ್ತಿತ ಸ್ವ–ಸಹಾಯ ಗುಂಪುಗಳನ್ನು ರಚಿಸಿ, ಯಶಸ್ವಿಯಾಗಿ ಮುನ್ನಡೆಸುತ್ತಾ ಸಹಕಾರ ಸಂಘಕ್ಕೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಸ್ವ ಸಹಾಯ ಗುಂಪುಗಳ ಸೇವಾ ನಿರತೆಯಾದ ಬೇಬಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ