ಕ್ರಿಸ್ಮಸ್ ಆಚರಣೆಗೆ ಅಡ್ಡಿ:  ಬಜರಂಗದಳ ಕಾರ್ಯಕರ್ತರನ್ನು ತರಾಟೆಗೆತ್ತಿಕೊಂಡ ಮಹಿಳೆಯರು | ವಿಡಿಯೋ ವೈರಲ್ - Mahanayaka
12:04 AM Wednesday 15 - October 2025

ಕ್ರಿಸ್ಮಸ್ ಆಚರಣೆಗೆ ಅಡ್ಡಿ:  ಬಜರಂಗದಳ ಕಾರ್ಯಕರ್ತರನ್ನು ತರಾಟೆಗೆತ್ತಿಕೊಂಡ ಮಹಿಳೆಯರು | ವಿಡಿಯೋ ವೈರಲ್

tumakuru
31/12/2021

ತುಮಕೂರು: ಸೌಹಾರ್ದಯತ ಕ್ರಿಸ್ ಮಸ್ ಆಚರಣೆಗೆ ಬಿಜೆಪಿ ಪರ ಸಂಘಟನೆ ಬಜರಂಗದಳದ ಕಾರ್ಯಕರ್ತರು ತಡೆಯೊಡ್ಡಲು ಯತ್ನಿಸಿದ್ದು, ಈ ವೇಳೆ ಬಜರಂಗದಳದ ಕಾರ್ಯಕರ್ತರನ್ನು ತರಾಟೆಗೆತ್ತಿಕೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿಳಿದೇವಾಲಯದ ಗ್ರಾಮದಲ್ಲಿ ನಡೆದಿದೆ.


Provided by

ಈ ಘಟನೆ ಡಿಸೆಂಬರ್ 28ರಂದು ನಡೆದಿದೆ ಎಂದು ಹೇಳಲಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ರಿಸ್ಮಸ್ ಆಚರಣೆಯ ವೇಳೆ ಕೆಲವರು ಬಜರಂಗದಳದ ಕಾರ್ಯಕರ್ತರು ಎಂದು ಹೇಳಿಕೊಂಡು ಗುಂಪುಕಟ್ಟಿಕೊಂಡು ಆಗಮಿಸಿದ್ದು, ಇಲ್ಲಿ ಮತಾಂತರ ನಡೆಯುತ್ತಿದೆ ಎಂದು ವಿವಾದ ಸೃಷ್ಟಿಸಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲಿದ್ದ ಮಹಿಳೆಯರು, ಇಲ್ಲಿ ಮತಾಂತರ ನಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವೇಳೆ ಬಜರಂಗದಳದ ಕಾರ್ಯಕರ್ತರು ಮಹಿಳೆಯರಿಗೆ ಅಸಂಬದ್ಧ ಪ್ರಶ್ನೆಗಳನ್ನು ಹಾಕಿದ್ದು, ನಿಮ್ಮ ಹಣೆಯಲ್ಲಿ ಸಿಂಧೂರ ಇಲ್ಲ, ಕಾಲುಂಗುರ ಇಲ್ಲ ಎಂದು ಪ್ರಶ್ನಿಸಲು ಆರಂಭಿಸಿದ್ದು, ಈ ವೇಳೆ ಮಹಿಳೆಯರು ಇದೇನು ಎಂದು ತಮ್ಮ ತಾಳಿಯನ್ನು ತೋರಿಸಿದ್ದು, ನಾವು ಮುಖ ತೊಳೆಯುವಾಗ ಸಿಂಧೂರ ಇರುತ್ತಾ ಮುಖದಲ್ಲಿ ಎಂದು ಪ್ರಶ್ನಿಸಿದ್ದಾರೆ. ಕಾಲುಂಗುರ ನಾವು ಹಾಕುವುದಿಲ್ಲ, ಇದನ್ನು ಕೇಳಲು ನಿಮಗೆ ಅಧಿಕಾರ ಕೊಟ್ಟದ್ದು ಯಾರು? ಎಂದು ತರಾಟೆಗೆತ್ತಿಕೊಂಡಿದ್ದಾರೆ.

ಇನ್ನೂ ಘಟನೆಯ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ರಾಜ್ಯ ಸರ್ಕಾರವು ಕ್ರೈಸ್ತರನ್ನು ಟಾರ್ಗೆಟ್ ಮಾಡಲು ಬಜರಂಗದಳಕ್ಕೆ ಪರೋಕ್ಷವಾಗಿ  ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎನ್ನುವ ಆಕ್ರೋಶದ ಮಾತುಗಳು ಕೂಡ ಕೇಳಿ ಬಂದಿದೆ.

ಗೃಹ ಸಚಿವರೇ ಮುಂದೆ ನಿಂತು ಇಂತಹ ಘಟನೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಬೀದಿ ರೌಡಿಗಳು ನ್ಯಾಯವನ್ನು ಕಾಯುವುದಾದರೆ, ಪೊಲೀಸರು ಯಾಕೆ? ದೇಶಕ್ಕೊಂದು ನ್ಯಾಯಾಂಗ ವ್ಯವಸ್ಥೆಗಳು ಯಾಕೆ? ರಾಜ್ಯ ಸರ್ಕಾರವು ಕ್ರೈಸ್ತರ ವಿರುದ್ಧ ದ್ವೇಷ ಹಾಗೂ ಅಸೂಯೆಯ ಕ್ರಮವಾಗಿಯೇ ಮತಾಂತರ ನಿಷೇಧ ಎಂಬ ಕಾನೂನು ತಂದಿದೆ. ಬಲವಂತದ ಮತಾಂತರ ತಡೆಯಲು ಈಗಾಗಲೇ ಕಾನೂನು ಇದೆ. ಆದರೆ, ಯಾರದ್ದೋ ಒತ್ತಡಕ್ಕೆ ಸಿಲುಕಿ ರಾಜ್ಯ ಸರ್ಕಾರ ಕ್ರೈಸ್ತರನ್ನು ಟಾರ್ಗೆಟ್ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಿಹಿ ಸುದ್ದಿ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ

ಅರುಣ್ ಸಿಂಗ್ ಮುಂದೆ ತನ್ನ ಬಯಕೆ ಹೇಳಿಕೊಂಡ ರೇಣುಕಾಚಾರ್ಯ

“ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ”

ಅಂಬೇಡ್ಕರ್, ಕುವೆಂಪು ವೃತ್ತ ವಿವಾದ: ಮೈಸೂರಿನ ಮಾತೃ ಮಂಡಳಿ ವೃತ್ತ ನೆಲಸಮ

ನಾಳೆ ಕರ್ನಾಟಕ ಬಂದ್ ಇದೆಯಾ?  | ಸಿಎಂ ಜೊತೆಗೆ ಕನ್ನಡ ಪರ ಸಂಘಟನೆ ಸಭೆ 

ಇತ್ತೀಚಿನ ಸುದ್ದಿ