ವಿದ್ಯುತ್ ಪ್ರವಹಿಸಿದ್ದ ಬಾಲಕನಿಗೆ ಚಿಕಿತ್ಸೆ ನೀಡದ ವೈದ್ಯ | ಬಾಲಕ ಸಾವು - Mahanayaka
12:07 PM Thursday 4 - December 2025

ವಿದ್ಯುತ್ ಪ್ರವಹಿಸಿದ್ದ ಬಾಲಕನಿಗೆ ಚಿಕಿತ್ಸೆ ನೀಡದ ವೈದ್ಯ | ಬಾಲಕ ಸಾವು

haveri
12/04/2021

ಹಾವೇರಿ: ವಿದ್ಯುತ್ ಪ್ರವಹಿಸಿ ಅಸ್ವಸ್ಥಗೊಂಡಿದ್ದ ಬಾಲಕನನ್ನು ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡದೇ ಬಾಲಕನ ಸಾವಿಗೆ ಕಾರಣವಾಗಿದ್ದಾರೆ.

 ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದಲ್ಲಿ  ಈ ಘಟನೆ ನಡೆದಿದ್ದು, 12 ವರ್ಷ ವಯಸ್ಸಿನ ಬಾಲಕ ಹಜರತ್ ಅಲಿ ಮೃತಪಟ್ಟ ಬಾಲಕನಾಗಿದ್ದಾನೆ.  ವಿದ್ಯುತ್ ತ್ಂತಿ ಸ್ಪರ್ಶಿಸಿ ಅಸ್ವಸ್ಥಗೊಂಡ ಬಾಲಕನನ್ನು ತಕ್ಷಣ ತಡಸ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು.

ಬಾಲಕನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಕೆಲಸದ ನೆಪ ಹೇಳಿದ ಡಾಕ್ಟರ್, ಆಸ್ಪತ್ರೆಯಿಂದಲೇ ಹೊರ ಹೋಗಿದ್ದರು. ಬೇರಾವ ಸಿಬ್ಬಂದಿಯೂ ಚಿಕಿತ್ಸೆ ನೀಡಲು ಮುಂದಾಗಿಲ್ಲ. 15 ನಿಮಿಷಕ್ಕೂ ಹೆಚ್ಚು ಕಾಲ ಜೀವನ್ಮರಣದ ನಡುವೆ ಹೋರಾಡಿದ ಬಾಲಕ ಕೊನೆಗೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ