ಬಾಲಕನಿಗೆ ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ:  ಬಾಲಕ ಆಸ್ಪತ್ರೆಗೆ ದಾಖಲು - Mahanayaka

ಬಾಲಕನಿಗೆ ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ:  ಬಾಲಕ ಆಸ್ಪತ್ರೆಗೆ ದಾಖಲು

thokottu
29/10/2022

ಮಂಗಳೂರು:  ನಗರದ ಹೊರವಲಯದ ದೇರಳಕಟ್ಟೆ ಖಾಸಗಿ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ಮೇಲಂಗಡಿಯ ಅಬ್ದುಲ್ ಮನಾಫ್‌ ಎಂಬ ಬಾಲಕನಿಗೆ ಚೊಂಬುಗುಡ್ಡೆಯ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ತೊಕ್ಕೊಟ್ಟು ಎಂಬಲ್ಲಿ ನಡೆದಿದೆ.

ಗುರುವಾರ ಸಂಜೆ ಮನಾಫ್ ಶಾಲೆ ಬಿಟ್ಟು ಬಸ್ಸಿನಲ್ಲಿ  ಬಂದು ತೊಕ್ಕೊಟುವಿನಲ್ಲಿ  ಇಳಿದು ನಡೆದುಕೊಂಡು  ಹೋಗುತ್ತಿದ್ದಾಗ ಇಬ್ಬರು ಸೇರಿ  ಮನಾಫ್‌ಗೆ ಹಲ್ಲೆ ಮಾಡಿದ್ದು, ಇದರಿಂದ ಮನಾಫ್‌ ತಲೆ ಮತ್ತು ಕಣ್ಣಿಗೆ ಗಾಯವಾಗಿದೆ.

ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ