ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಪ್ರಮುಖ ಆರೋಪಿಯ ಬಂಧನಕ್ಕೆ ಬಿಲ್ಲವ ಸಂಘಟನೆಗಳಿಂದ ಒತ್ತಾಯ - Mahanayaka
11:56 PM Wednesday 10 - December 2025

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಪ್ರಮುಖ ಆರೋಪಿಯ ಬಂಧನಕ್ಕೆ ಬಿಲ್ಲವ ಸಂಘಟನೆಗಳಿಂದ ಒತ್ತಾಯ

belthangady
10/01/2023

ಬೆಳ್ತಂಗಡಿ: ಟಿ.ವಿ. ನೋಡಲು ಬರುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆಕೆಯನ್ನು ಗರ್ಭವತಿಯಾಗಿಸಿ ಬಳಿಕ ಬಲವಂತದಿಂದ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ ಪ್ರಕರಣದಲ್ಲಿ ನಿಜವಾದ ಆರೋಪಿಯನ್ನು ಕೂಡಲೇ ಬಂಧಿಸಿ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರಿ ಗುರುನಾರಾಯಣ ಸ್ವಾಮಿ ಸೇವಾ ಸಂಘ ರಿ ಬೆಳ್ತಂಗಡಿ, ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಬೆಳ್ತಂಗಡಿ, ವೇಣೂರು ಘಟಕದ ವತಿಯಿಂದ ಜ.9 ರಂದು ಬೆಳ್ತಂಗಡಿ ಠಾಣೆಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ಘಟನೆಯ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ ಮುಖಂಡರುಗಳು ಇದೊಂದು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದಲ್ಲದೆ ಬಲವಂತದ ಗರ್ಭ ಪಾತವನ್ನೂ ಮಾಡಲಾಗಿದೆ. ದೂರು ದಾಖಲಾಗಿ ಒಂದು ವಾರ ಕಳೆದರೂ ಪ್ರಮುಖ ಆರೋಪಿಯ ಬಂಧನವಾಗಿಲ್ಲ ಕೇವಲ ನಾಲ್ಕು ಮಂದಿಯ ವಿರುದ್ದ ಮಾತ್ರ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ಸಮಗ್ರವಾದ ವಿಚಾರಣೆ ನಡೆಸಿ ಕೂಡಲೇ ಎಲ್ಲ ಆರೋಪಿಗಳನ್ನೂ ಗುರುತಿಸಿ  ಬಂಧಿಸುವ ಕಾರ್ಯ ನಡೆಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ದಾರಿಯನ್ನು ಅನುಸರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ, ಪ್ರಧಾನ ಕಾರ್ಯದರ್ಶಿ ಜಯವಿಕ್ರಮ್, ಉಪಾಧ್ಯಕ್ಷ ಶೇಖರ ಬಂಗೇರ, ಕೋಶಾಧಿಕಾರಿ ಅಭಿನಂದನ್ ಹರೀಶ್ ಕುಮಾರ್, ನಿರ್ದೇಶಕರುಗಳಾದ ದಿನೇಶ್ ಕೋಟ್ಯಾನ್, ಯಶೋಧರ, ಗೋಪಾಲ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಕಾರ್ಯದರ್ಶಿ ಶಂಭಾವಿ ಬಂಗೇರ, ಮಾಜಿ ಅಧ್ಯಕ್ಷೆ ರಾಜಶ್ರೀ ರಮಣ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಎಚ್., ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್, ಕಾರ್ಯದರ್ಶಿ ಸುನಿಲ್ ಕನ್ಯಾಡಿ ಮಾಜಿ ಅಧ್ಯಕ್ಷ ಹರೀಶ್ ಸುವರ್ಣ ಕನ್ಯಾಡಿ, ಕೇಂದ್ರ ಸಮಿತಿ ನಿರ್ದೇಶಕ ಎಂ. ಕೆ. ಪ್ರಸಾದ್,  ವೇಣೂರು ಘಟಕದ ಅಧ್ಯಕ್ಷೆ ಹರಿಣಿ ಕರುಣಾಕರ, ಕಾರ್ಯದರ್ಶಿ ಸುಜಿತ್, ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಕುಕ್ಕೆಡಿ,ಕಾನೂನು ಸಲಹೆಗಾರ ಮನೋಹರ್ ಇಳಂತಿಲ, ಪ್ರಶಾಂತ್ ಮಚ್ಚಿನ, ರಮಾನಂದ ಮುಂಡೂರು, ಶಾಂತ ಬಂಗೇರ, ಗುರುರಾಜ್ ಗುರಿಪಳ್ಳ, ಪ್ರಶಾಂತ್ ಜಶನ್, ಸುರೇಂದ್ರ ಬಂಗಾಡಿ ಮೊದಲದವರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ