ಅಪ್ರಾಪ್ತ ವಯಸ್ಸಿನ ಬಾಲಕಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಅತ್ಯಾಚಾರ! - Mahanayaka
9:02 PM Wednesday 20 - August 2025

ಅಪ್ರಾಪ್ತ ವಯಸ್ಸಿನ ಬಾಲಕಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಅತ್ಯಾಚಾರ!

25/01/2021


Provided by

ಜೈಪುರ:  ಅಪ್ರಾಪ್ತ ವಯಸ್ಸಿನ ಬಾಲಕಿ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಢಾಬಾ ಮಾಲಿಕನ ಮೇಲೆ ದೂರು ದಾಖಲಾಗಿದ್ದು, ಅತ್ಯಾಚಾರ ಸೇರಿದಂತೆ ವಿವಿಧ ಪ್ರಕರಣಗಳನ್ನು ಆರೋಪಿಯ ಮೇಲೆ ದಾಖಲಿಸಲಾಗಿದೆ.

ವಿಷ್ಣು ಗುರ್ಜರ್ ಎಂಬಾತ ಸಂತ್ರಸ್ತ ಕುಟುಂಬದವರ ಮನೆಯ ಬಳಿಯಲ್ಲಿ ಢಾಬಾ ನಡೆಸುತ್ತಿದ್ದ. ಕಳೆದ ಒಂದು ವರ್ಷಗಳಿಂದ ಈ ಕುಟುಂಬದ ಮಹಿಳೆಯೊಬ್ಬರನ್ನು ಅತ್ಯಾಚಾರ ಎಸಗುತ್ತಿದ್ದ. ಇದರ ಬಳಿಕ ಈತ ಮಹಿಳೆಯ ತಂಗಿ ಹಾಗೂ ಮಗಳ ಮೇಲೆಯೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಿಳೆ ವಿಷ್ಣುವಿನ ವಿರುದ್ಧ ದೂರು ನೀಡಿದ ಬಳಿಕ ಕುಟುಂಬದ ಇತರ ಸದಸ್ಯರು ಕೂಡ ಈತನ ವಿರುದ್ಧ ದೂರು ದಾಖಲಿಸಿದ್ದಾರೆ.  ಜನವರಿ 21ರಂದು ಮಹಿಳೆ ಮೊದಲ ಬಾರಿಗೆ ದೂರು ದಾಖಲಿಸಿದ್ದಾರೆ. ಆ ಬಳಿಕ ಇತರ ಸದಸ್ಯರು ಕೂಡ ದೂರು ದಾಖಲಿಸಿದ್ದಾರೆ.

ಸದ್ಯ ಆರೋಪಿ ವಿಷ್ಣುವಿನ ವಿರುದ್ಧ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ