ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಬರ್ಬರವಾಗಿ ಹತ್ಯೆ | ಮನನೊಂದ ಹೆತ್ತವರು ಆತ್ಮಹತ್ಯೆಗೆ ಶರಣು - Mahanayaka
3:39 AM Wednesday 17 - September 2025

ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಬರ್ಬರವಾಗಿ ಹತ್ಯೆ | ಮನನೊಂದ ಹೆತ್ತವರು ಆತ್ಮಹತ್ಯೆಗೆ ಶರಣು

14/03/2021

ನವದೆಹಲಿ: ಹೆಣ್ಣು ಹೆತ್ತವರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು ಎನ್ನುವ ಮಾತಿದೆ. ಈ ಘಟನೆಯನ್ನು ಕೇಳಿದರೆ, ಹೆಣ್ಣು ಹೆತ್ತವರು ಬೆಚ್ಚಿಬೀಳುವುದು ಖಚಿತ. ವ್ಯಕ್ತಿಯೋರ್ವ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾಗಿದ್ದು, ಈ ವೇಳೆ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆಯಿಂದ ನೊಂದ ಮಗುವಿನ ತಂದೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.


Provided by

ಈ ಘಟನೆ ದಾದರ್ ನ ಹವೇಲಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 30 ವರ್ಷ ವಯಸ್ಸಿನ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.  ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವನ್ನು ಆರೋಪಿಯು  ಅಪಾರ್ಟ್ ಮೆಂಟ್ ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಗು ಜೋರಾಗಿ ಅತ್ತಿದ್ದು, ಇದರಿಂದ ಕೋಪಗೊಂಡ ಆರೋಪಿ ರಜತ್, ಮಗುವಿನ ಕತ್ತು ಸೀಳಿ ಕೊಂದಿದ್ದು, ದೇಹವನ್ನು ಚೀಲವೊಂದರಲ್ಲಿ ಕಟ್ಟಿ ಬಾತ್ ರೂಮ್ ಕಿಟಕಿಯಿಂದ ಹೊರಗೆ ಎಸೆದಿದ್ದಾನೆ.

ಬಾಲಕಿ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನುಮಾನಗೊಂಡು ಫ್ಲ್ಯಾಟ್ ನಲ್ಲಿ ಹುಡುಕಾಟ ನಡೆಸಿದ್ದು, ಈ ವೇಳೆ ಆರೋಪಿಯ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಆರೋಪಿಯನ್ನು ಪೊಲೀಸರ ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ಆರೋಪಿಯು ತಪ್ಪು ಒಪ್ಪಿಕೊಂಡಿದ್ದಾನೆ.

ಇನ್ನು ಮಗಳಿಗಾದ ದುಸ್ಥಿತಿಯನ್ನು ನೆನೆದು ತೀವ್ರವಾಗಿ ನೊಂದ ಮಗುವಿನ ಪೋಷಕರು ನೋವನ್ನು ತಾಳಲಾರದೇ ಸಾವಿಗೆ ಶರಣಾಗಿದ್ದಾರೆ.  30 ವರ್ಷ ವಯಸ್ಸಿನ ವ್ಯಕ್ತಿಯ ಕ್ಷಣಿಕ ಖುಷಿಗಾಗಿ ಮೂರು ಜೀವಗಳು ಬಲಿಯಾಗಿದ್ದು, ಇಂತಹ ಪ್ರಪಂಚಕ್ಕೆ ಗುಡ್ ಬೈ ಹೇಳಿದ್ದಾರೆ.

ಇತ್ತೀಚಿನ ಸುದ್ದಿ