ರಾತ್ರೋ ರಾತ್ರಿ ಬಾಳೆ, ತೆಂಗು  ಮಣ್ಣುಪಾಲು | ಮಗುವನ್ನು ಕಳೆದುಕೊಂಡಂತೆ ಗೋಳಾಡಿದ ಮಹಿಳೆ!! | Video - Mahanayaka
9:26 PM Thursday 11 - September 2025

ರಾತ್ರೋ ರಾತ್ರಿ ಬಾಳೆ, ತೆಂಗು  ಮಣ್ಣುಪಾಲು | ಮಗುವನ್ನು ಕಳೆದುಕೊಂಡಂತೆ ಗೋಳಾಡಿದ ಮಹಿಳೆ!! | Video

chamarajanagara
18/01/2023

ಚಾಮರಾಜನಗರ: ಹೆತ್ತ ಮಕ್ಕಳಂತೆ 3–4 ವರ್ಷ ಸಾಕಿ ದೊಡ್ಡದು ಮಾಡಿದ್ದ ಬೆಳೆ ಕಣ್ಣೆದುರೇ ಮಣ್ಣು ಪಾಲಾದ್ದರಿಂದ ಮಹಿಳೆಯೊಬ್ಬರು ಗೋಳಾಡಿ ಸಂಕಟ ಹೊರಹಾಕಿದ ಕರುಳು ಹಿಂಡುವ ಘಟನೆ ಚಾಮರಾಜನಗರ ತಾಲೂಕಿನ ವಡ್ಗಲ್ ಪುರದಲ್ಲಿ ನಡೆದಿದೆ.


Provided by

ಆನೆ ಹಿಂಡು ರಾತ್ರೋ ರಾತ್ರಿ ಬಂದು ಬಾಳೆ, ತೆಂಗನ್ನು ನಾಶ ಪಡಿಸಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಜಮೀನಿಗೆ ಬಂದು ಬೆಳೆ ಮಣ್ಣು ಪಾಲಾಗಿರುವುದನ್ನು ಕಂಡು ದುಃಖ ತಡೆಯಲಾಗದೇ ಕಣ್ಣೀರು ಹಾಕಿ ಮಹಿಳೆ ಗೋಳಾಡಿದ್ದಾರೆ.

ಯಾರೂ ಎಷ್ಟೇ ಸಮಾಧಾನ ಪಡಿಸಿದರು  ಬಿಕ್ಕಿ–ಬಿಕ್ಕಿ ಅತ್ತ ಮಹಿಳೆ ಕಂಡು ಬೇರೆಯವರೂ ಕಣ್ಣೀರಾಗಿದ್ದಾರೆ. ಪ್ರಾಣಿ ಮತ್ತು ಮಾನವ ಸಂಘರ್ಷದದ ಕರಾಳತೆಯನ್ನು ಮಹಿಳೆಯ ಕಣ್ಣೀರು ಸಾಕ್ಷೀಕರಿಸುತ್ತಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ