ಚರ್ಚ್, ಪ್ರಾರ್ಥನಾಲಯಗಳಲ್ಲಿ ಬಲಿಪೂಜೆ, ಪ್ರಾರ್ಥನಾ ವಿಧಿಗಳು ರದ್ದು | ಕಾರಣ ಏನು ಗೊತ್ತಾ? - Mahanayaka
5:50 AM Wednesday 20 - August 2025

ಚರ್ಚ್, ಪ್ರಾರ್ಥನಾಲಯಗಳಲ್ಲಿ ಬಲಿಪೂಜೆ, ಪ್ರಾರ್ಥನಾ ವಿಧಿಗಳು ರದ್ದು | ಕಾರಣ ಏನು ಗೊತ್ತಾ?

church
08/04/2021


Provided by

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಚರ್ಚ್, ಪ್ರಾರ್ಥನಾಲಯಗಳು ಮತ್ತು ಸಂಸ್ಥೆಗಳಲ್ಲಿ ಸಾರ್ವಜನಿಕ ಬಲಿ ಪೂಜೆ ಮತ್ತು ಪ್ರಾರ್ಥನ ವಿಧಿಗಳನ್ನು ನಡೆಸುವುದನ್ನು ಏಪ್ರಿಲ್ 29ವರೆಗೆ ರದ್ದುಗೊಳಿಸಿ ಬೆಂಗಳೂರಿನ ಮಹಾ ಧರ್ಮಾಧ್ಯಕ್ಷ ಡಾ.ಪೀಟರ್ ಮಚಾದೋ ತಿಳಿಸಿದ್ದಾರೆ.

ಕೊರೊನಾ ವೈರಸ್ ಎರಡನೇ ಅಲೆ ತೀವ್ರವಾಗುತ್ತಿದೆ ಎಂದು ರಾಜ್ಯ ಸರ್ಕಾರವು ಏಪ್ರಿಲ್ 6ರಂದು ನೂತನ ಕೊವಿಡ್ ಮಾರ್ಗಸೂಚಿಗಳನ್ನು  ಬಿಡುಗಡೆ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಒಳಿತು ಹಾಗೂ ರಕ್ಷಣೆಗಾಗಿ ಹಾಗೂ ಕೊರೊನಾ ವೈರಸ್ ನ್ನು ತಡೆಯುವ ನಿಟ್ಟಿನಲ್ಲಿ ನಾವು ಆದೇಶಕ್ಕೆ ಬದ್ಧರಾಗಬೇಕು ಎಂದು ಡಾ.ಪೀಟರ್ ಮಚಾದೋ ತಿಳಿಸಿದ್ದಾರೆ.

ಸಾರ್ವಜನಿಕ ಬಲಿಪೂಜೆ ಹಾಗೂ ಪ್ರಾರ್ಥನಾ ವಿಧಿಗಳನ್ನು ಏಪ್ರಿಲ್ 7ರಿಂದ ಏಪ್ರಿಲ್ 20ರವರೆಗೆ ಪ್ರಾರ್ಥನಾ ವಿಧಿಗಳನ್ನು ರದ್ದು ಮಾಡಲಾಗಿದೆ. ಚರ್ಚ್ ಹಾಗೂ ಪ್ರಾರ್ಥನಾಲಯಗಳನ್ನು ವೈಯಕ್ತಿಕ ಭೇಟಿಗಾಗಿ ತೆರೆಯಬಹುದು. ಇನ್ನೂ ಗುಂಪು ಸೇರದೇ ವೈಯಕ್ತಿಕ ಪ್ರಾರ್ಥನೆಗಳನ್ನು ಸಲ್ಲಿಸಬಹುದಾಗಿದೆ. ಈ ಸಂದರ್ಭದಲ್ಲಿ ಕೊರೊನಾ ಮಾರ್ಗ ಸೂಚಿಗಳನ್ನು ಅನುಸರಿಸಬೇಕು. ಈ ಮೊದಲೇ ಯೋಜಿಸಲಾಗಿರುವ ಸಂಸ್ಕಾರ ಕಾರ್ಯಗಳನ್ನು ನಡೆಸಬಹುದಾಗಿದೆ. ಆದರೆ 50 ಜನರು ಮೀರದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಸಬೇಕು.  ಅಂತ್ಯಸಂಸ್ಕಾರದಲ್ಲಿ ಕೂಡ 50 ಜನ ಮೀರಬಾರದು.  ಮೃತರಿಗೆ ಬಲಿಪೂಜೆಯನ್ನು ದೇವಾಲಯದಲ್ಲಿ ಆಚರಿಸುವಂತಿಲ್ಲ. ಸಮಾಧಿ ಸ್ಥಳದಲ್ಲಿ ಅರ್ಪಿಸಬಹುದು ಎಂದು ಮಚಾದೋ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ