ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ! - Mahanayaka
11:15 PM Tuesday 14 - October 2025

ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ!

bjp bheeshma
26/07/2021

ಬೆಂಗಳೂರು: ರಾಜ್ಯದಲ್ಲಿ ಯಡಿಯೂರಪ್ಪ ಮುಕ್ತ ಬಿಜೆಪಿ ಅಭಿಯಾನ ಯಶಸ್ವಿಯಾಗಿದ್ದು,  ಸಿ.ಟಿ.ರವಿ ಹಾಗೂ  ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆಗಳು ಎಂದು ರಾಜ್ಯ ಕಾಂಗ್ರೆಸ್ ಯಡಿಯೂರಪ್ಪ ರಾಜೀನಾಮೆ ವಿಚಾರವಾಗಿ ರಾಜ್ಯ ಬಿಜೆಪಿಯನ್ನು ಚುಚ್ಚಿದೆ.


Provided by

ಯಡಿಯೂರಪ್ಪರನ್ನು ಬಿಜೆಪಿಯ ಭೀಷ್ಮ ಎಂದು ವರ್ಣಿಸಿದ ಕಾಂಗ್ರೆಸ್, ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ ಎಂದು ಬಿಜೆಪಿಗೆ ಚುಚ್ಚಿದ್ದು, ಯಡಿಯೂರಪ್ಪ ರಾಜೀನಾಮೆಗಾಗಿ ಸಿ.ಟಿ.ರವಿ ಹಾಗೂ ನಳಿನ್ ಕುಮಾರ್ ಕಟೀಲ್ ನಡೆಸಿದ ಅಭಿಯಾನ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿ ಟ್ವೀಟ್ ಮಾಡಿದೆ.

ನಾನು ಯಶಸ್ವಿಯಾಗಿ ಅವಧಿ ಪೂರೈಸುತ್ತೇನೆ ಎಂದು ಹೇಳುತ್ತಿದ್ದ ಯಡಿಯೂರಪ್ಪನವರನ್ನು ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕಣ್ಣೀರು ಸುರಿಸುತ್ತಾ ಇಳಿದು ಹೋಗುವಂತೆ ಮಾಡಿದ್ದೀರಿ ಎಂದು ತೀಕ್ಷ್ಣ ನುಡಿಗಳನ್ನು ಕಾಂಗ್ರೆಸ್ ಆಡಿದ್ದು, ಯಡಿಯೂರಪ್ಪನವರನ್ನು ಷಡ್ಯಂತ್ರಗಳನ್ನು ನಡೆಸುವ ಮೂಲಕ ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡಲಾಗಿದೆ ಎಂದು ಚುಚ್ಚಿದ್ದಾರೆ.

ಇನ್ನಷ್ಟು ಸುದ್ದಿಗಳು…

ಏರೆಗ್ಲಾ ಪನೋಡ್ಚಿ…! | “ನಳಿನ್ ಕುಮಾರ್ ಆಡಿಯೋ ಮಿಮಿಕ್ರಿ ಆರ್ಟಿಸ್ಟ್ ಯಾರೆಂದು ತಿಳಿಯಿತು”

ಹೊಳೆದಾಟಿದ ಮೇಲೆ ಅಂಬಿಗನ ಹಂಗೇಕೆ? | ಸಿಎಂಗೆ ಕನಿಷ್ಠ ಗೌರವವನ್ನೂ ಕೊಡದೆ ಹೊರಗೆ ತಳ್ಳಲಾಗಿದೆ | ಜಿ.ಪರಮೇಶ್ವರ್

ಯಡಿಯೂರಪ್ಪ ವಿರೋಧಿ ಬಣದಿಂದ ಬ್ರಾಹ್ಮಣ ಸಿಎಂಗಾಗಿ ಒತ್ತಡ?

ಬಸವಣ್ಣಗೆ ಮಾಡಿದ ಅನ್ಯಾಯ ಯಡಿಯೂರಪ್ಪಗೂ ಆಯಿತು | ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಲಾಗಿದೆ | ಸತೀಶ್ ಜಾರಕಿಹೊಳಿ

ಕಟು ವಾಕ್ಯಗಳಿಂದ ಯಡಿಯೂರಪ್ಪ ರಾಜೀನಾಮೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ!

ಫೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ಆಯುರ್ವೇದ ವೈದ್ಯೆ!

ಇತ್ತೀಚಿನ ಸುದ್ದಿ