ಬನಾರಸ್ ಚಿತ್ರ  ಬಾಯ್ ಕಾಟ್’ಗೆ ಜಮೀರ್ ಪುತ್ರ ಝೈದ್ ಖಾನ್ ಏನಂದ್ರು? - Mahanayaka

ಬನಾರಸ್ ಚಿತ್ರ  ಬಾಯ್ ಕಾಟ್’ಗೆ ಜಮೀರ್ ಪುತ್ರ ಝೈದ್ ಖಾನ್ ಏನಂದ್ರು?

banaras
01/10/2022


Provided by

ಬನಾರಸ್ ಚಿತ್ರ  ಬಾಯ್ ಕಾಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆಗೆ  ಮಾತನಾಡಿದ ಚಿತ್ರದ ನಟ, ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್, ನನ್ನ ತಪ್ಪು ಏನಾದ್ರೂ ಇದ್ದಿದ್ರೆ, ಬಾಯ್ ಕಾಟ್ ನ್ನು ಒಪ್ಪುತ್ತಿದ್ದೆ ಎಂದಿದ್ದಾರೆ.

ಚಿತ್ರಮಂದಿರಗಳಲ್ಲಿ ನಾಡ ಗೀತೆ ಹಾಕಬೇಕು ಎಂದು ಆಗ್ರಹಿಸಿ ಝೈದ್ ಖಾನ್ ಇಂದು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು. ಬಳಿಕ ಮಾಧ್ಯಮಗಳಿಗೆ ಎದುರಾದ ಅವರಿಗೆ ಬನಾರಸ್ ಬಾಯ್ ಕಾಟ್ ವಿಚಾರವಾಗಿ ಪತ್ರಕರ್ತರು ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ಅವರು ಅದಕ್ಕೆ ಯಾರಾದ್ರೂ ತಲೆಕೆಡಿಸಿಕೊಳ್ಳುತ್ತಾರಾ? ನನ್ನ ತಪ್ಪು ಏನಾದ್ರೂ ಇದ್ರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಬಾಯ್ ಕಾಟ್ ಏನೂ ಇಲ್ಲ, ಪ್ರಪಂಚದಲ್ಲಿ ಸೋಲು, ಗೆಲುವು  ಎರಡೇ ಇರೋದು ಎಂದರು.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಮೂರ್ತಿ ಇಡಲು ಜಮೀರ್ ಖಾನ್ ವಿರೋಧ ಮಾಡಿರೋದಕ್ಕೆ ಬನಾರಸ್ ಬಾಯ್ ಕಾಟ್ ಅಂತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನನಗೂ ಅದಕ್ಕೂ ಸಂಬಂಧವೇ ಇಲ್ಲ, ನಾನೊಬ್ಬ ನಟ, ನಾನಾಯ್ತು ನನ್ನ ಇಂಡಸ್ಟ್ರಿ ಆಯ್ತು ಅದು ಬಿಟ್ಟು ಬೇರೇನೂ ಗೊತ್ತಿಲ್ಲ. ಒಬ್ಬ ಕಲಾವಿದನಾಗಿ ನನ್ನ ಬಳಿ ಸಿನಿಮಾ ಬಗ್ಗೆ ಕೇಳಿ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ