ಸುಹಾಸ್ ಶೆಟ್ಟಿ ಕೊಲೆ, ಉಗ್ರರ ದಾಳಿ ಖಂಡಿಸಿ ಬಂದ್: ಕಾಫಿ ನಾಡು ಸ್ತಬ್ಧ - Mahanayaka

ಸುಹಾಸ್ ಶೆಟ್ಟಿ ಕೊಲೆ, ಉಗ್ರರ ದಾಳಿ ಖಂಡಿಸಿ ಬಂದ್: ಕಾಫಿ ನಾಡು ಸ್ತಬ್ಧ

chikkamagaluru
05/05/2025

ಕೊಟ್ಟಿಗೆಹಾರ:  ಸುಹಾಸ್ ಶೆಟ್ಟಿ ಕೊಲೆ ಹಾಗೂ ಕಾಶ್ಮೀರದಲ್ಲಿ ಉಗ್ರರ ದಾಳಿ ಖಂಡಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಇಂದು ಕಾಫಿನಾಡಿನಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಜಿಲ್ಲಾಡಳಿತದ ವಿರೋಧದ ನಡುವೆಯೂ ಸಂಘಪರಿವಾರದ ವತಿಯಿಂದ ಸ್ವಯಂಪ್ರೇರಿತ ಬಂದ್ ನಡೆಯುತ್ತಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸೇರಿದಂತೆ ಗಡಿ ಪ್ರದೇಶಗಳು ಸಂಪೂರ್ಣ ಸ್ಥಬ್ಧವಾಗಿದ್ದು, ಬೆಳಗ್ಗೆ 9 ಗಂಟೆಯಾಗಿದ್ದರೂ ಅಂಗಡಿ– ಮುಂಗಟ್ಟುಗಳು ತೆರೆಯದೇ ಉಳಿದಿವೆ. ಬಂದ್ ಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ.

ಜಿಲ್ಲಾಡಳಿತ ಬಂದ್ ಗೆ ನಿರ್ಣಯಾತ್ಮಕ ವಿರೋಧ ವ್ಯಕ್ತಪಡಿಸಿದರೂ, ಸ್ಥಳೀಯ ಸಂಘಟನೆಗಳು ಕಾನೂನು ಸುವ್ಯವಸ್ಥೆ ಬದಿಗೊತ್ತಿ ಬಂದ್ ಆಯೋಜಿಸಿದ್ದು, ಪರಿಸ್ಥಿತಿ ನಿಗಾವಹಿಸುವಲ್ಲಿ ಪೊಲೀಸರು ಮುತುವರ್ಜಿತ ಕ್ರಮ ಕೈಗೊಂಡಿದ್ದಾರೆ.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ