ದಾಖಲೆಗಳ ದುರುಪಯೋಗ: ಬಂಧಿತ ಗ್ರಾಮಕರಣೀಕನ ಜಾಮೀನು ಅರ್ಜಿ ವಜಾ - Mahanayaka

ದಾಖಲೆಗಳ ದುರುಪಯೋಗ: ಬಂಧಿತ ಗ್ರಾಮಕರಣೀಕನ ಜಾಮೀನು ಅರ್ಜಿ ವಜಾ

jayachandra
10/09/2022


Provided by

ಬೆಳ್ತಂಗಡಿ: ಕಂದಾಯ ಇಲಾಖೆಯ ದಾಖಲೆಗಳನ್ನು ದುರುಪಯೋಗ ಮಾಡಿದ ಪ್ರಕರಣ ಸಂಬಂಧಪಟ್ಟಂತೆ ಗ್ರಾಮಲೆಕ್ಕಿಗ ಹಾಗೂ ಬ್ರೋಕರ್ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ದೂರು ನೀಡಿದ್ದು, ಅದರಂತೆ ಬೆಳ್ತಂಗಡಿ ಪೊಲೀಸರು ಸೆಪ್ಟೆಂಬರ್ 7 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿಯ ಸಿ.ಎ ಕೆರೆ ಮನೆಯಿಂದ ಗ್ರಾಮಕರಣೀಕ ಜಯಚಂದ್ರ ಅವನನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು ಇಂದು (ಶುಕ್ರವಾರ) ಬೆಳ್ತಂಗಡಿ ಕೋರ್ಟ್‌ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.

ಇನ್ನು ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ಸರಕಾರಿ ದಾಖಲೆ ದುರುಪಯೋಗ ಪ್ರಕರಣ ಸಂಬಂಧ ಬಂಧನವಾಗಿರುವ ಗ್ರಾಮಲೆಕ್ಕಿಗ ಜಯಚಂದ್ರನ ಬಗ್ಗೆ ಮಾಹಿತಿ ಪಡೆದು  ತೆಕ್ಕಾರು, ಬಾರ್ಯ, ಪುತ್ತಿಲ, ಕರಾಯ, ತಣ್ಣಿರುಪಂಥ ಗ್ರಾಮದ ಗ್ರಾಮಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಚಂದ್ರನನ್ನು ಕರ್ತವ್ಯ ಲೋಪ ಎಸಗಿದರಿಂದ ಅಮಾನತು ಮಾಡಿ ಆದೇಶ ಹೋರಾಡಿಸಿದ್ದಾರೆ‌‌.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ