ಜನಸಾಮಾನ್ಯರಿಗೆ ಹೊರೆ: 15 ದಿನಗಳಲ್ಲೇ ಬೆಂಗಳೂರು–ಮೈಸೂರು ರಸ್ತೆ ಟೋಲ್ ದರ ಹೆಚ್ಚಳ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಧಿಕ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು 15 ದಿನಗಳ ಹಿಂದಷ್ಟೇ ಬಹಳಷ್ಟು ಜನ ವಿರೋಧ ವ್ಯಕ್ತಪಡಿಸಿ ಭಾರೀ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಲೆಕ್ಕಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಏಪ್ರಿಲ್ 1ರಿಂದ ಮತ್ತಷ್ಟು ಟೋಲ್ ದರ ಏರಿಕೆ ಮಾಡಿದೆ.
ಕಾರ್, ವ್ಯಾನ್, ಜೀಪ್ಗಳ ಏಕಮುಖ ಸಂಚಾರ ಟೋಲ್ ದರವನ್ನು ₹135 ರಿಂದ ₹165ಕ್ಕೆ ಏರಿಸಲಾಗಿದೆ. ಆ ಮೂಲಕ ಏಕಾಏಕಿ 20 ರೂ ಹೆಚ್ಚಿಸಲಾಗಿದೆ. ದ್ವಿಮುಖ ಸಂಚಾರ ದರವು ₹205ರಿಂದ ₹250ಕ್ಕೆ ಏರಿಕೆಗೊಂಡಿದೆ (45 ರೂ ಹೆಚ್ಚಳವಾಗಿದೆ). ಲಘು ವಾಹನಗಳು, ಮಿನಿ ಬಸ್ಗಳ ಏಕಮುಖ ಟೋಲ್ ₹220ರಿಂದ ₹270ಕ್ಕೆ ಹಾಗೂ ದ್ವಿಮುಖ ಸಂಚಾರಕ್ಕೆ ₹405 (₹75 ಹೆಚ್ಚಳ) ನಿಗದಿ ಮಾಡಲಾಗಿದೆ.
ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳ ಏಕಮುಖ ಟೋಲ್ ಬರೋಬ್ಬರಿ ₹565ಕ್ಕೆ ಏರಿಕೆ ಆಗಿದೆ (₹105 ಹೆಚ್ಚಳ). ದ್ವಿಮುಖ ಸಂಚಾರಕ್ಕೆ ₹850 ನಿಗದಿಪಡಿಸಲಾಗಿದೆ (₹ 160 ಹೆಚ್ಚಳವಾಗಿದೆ).
ಸಮರ್ಪಕವಾಗಿ ಸರ್ವೀಸ್ ರಸ್ತೆ ಮಾಡಿಲ್ಲ. ರೈಲ್ವೆ ಹಳಿ, ಸೇತುವೆಗಳು ಇರುವಲ್ಲಿ ಸರ್ವೀಸ್ ರಸ್ತೆ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇದು ದಶಪಥ ಅಲ್ಲ ಬದಲಿಗೆ ಆರು ಪಥಗಳ ರಸ್ತೆ ಎಂಬ ಆರೋಪಗಳು ಹಿಂದೆ ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ದುಬಾರಿ ಟೋಲ್ ವಸೂಲಿ ಮಾಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದರು. ಆದರೆ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಈ ರಸ್ತೆಗೆ ಕೇವಲ 15 ದಿನಗಳಲ್ಲಿಯೇ ಮತ್ತೆ ಟೋಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಚುನಾವಣಾ ಸಮಯದಲ್ಲೂ ಟೋಲ್ ದರ ಹೆಚ್ಚಾಗಿರುವುದರ ಕುರಿತು ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























