ತನ್ನ ಕ್ಯಾಬಿನ್ ಒಳಗೆಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್ ಮ್ಯಾನೇಜರ್ - Mahanayaka
10:58 AM Thursday 29 - January 2026

ತನ್ನ ಕ್ಯಾಬಿನ್ ಒಳಗೆಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್ ಮ್ಯಾನೇಜರ್

swapna
09/04/2021

ಕಣ್ಣೂರು: ಬ್ಯಾಂಕ್ ಮ್ಯಾನೇಜರ್ ವೋರ್ವರು ತಮ್ಮ ಕ್ಯಾಬಿನ್ ಒಳಗೆಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಬೆಳಗ್ಗೆ  ಕೇರಳದ ಕಣ್ಣೂರಿನ ತೊಕ್ಕಿಲಂಗಡಿ ಶಾಖೆಯಲ್ಲಿ ನಡೆದಿದೆ.

ಕೆನರಾ ಬ್ಯಾಂಕ್ ತೊಕ್ಕಿಲಂಗಡಿ ಶಾಖೆಯ ಮ್ಯಾನೇಜರ್ ಸ್ವಪ್ನಾ ಆತ್ಮಹತ್ಯೆಗೆ ಶರಣಾದವರಾಗಿದ್ದು, ಎಂದಿನಂತೆಯೇ ಬ್ಯಾಂಕ್ ಗೆ ಬಂದಿದ್ದ ಅವರು, ತಮ್ಮ ಕ್ಯಾಬಿನ್ ನೊಳಗೆ ಹೋಗಿದ್ದಾರೆ. ಸಹೋದ್ಯೋಗಿಗಳು ಬ್ಯಾಬಿನ್ ಗೆ ಕೆಲಸದ ವಿಚಾರವಾಗಿ ಮಾತನಾಡಲು ತೆರಳಿದಾಗ ಅವರು ಫ್ಯಾನ್ ನಲ್ಲಿ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.

ತಕ್ಷಣವೇ ಸ್ವಪ್ನಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿಯಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ತ್ರಿಶೂರ್ ಮೂಲದ ಸ್ವಪ್ನಾ  ಅವರು ತನ್ನ ಕುಟುಂಬದ ಜೊತೆಗೆ ಇಲ್ಲಿನ ಕೂತುಪರಂಬ ಬಳಿಯ ತೊಕ್ಕಿಲಂಗಡಿಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಇದೀಗ ಅವರು ಅನಿರೀಕ್ಷಿತವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಕುಟುಂಬಕ್ಕೆ ಆಘಾತ ಉಂಟಾಗಿದೆ.

ಇತ್ತೀಚಿನ ಸುದ್ದಿ