ಮನೆ ಸೀಜ್ ಮಾಡಿದ ಬ್ಯಾಂಕ್ ಅಧಿಕಾರಿಗಳು: ಮನೆ ಒಳಗೆ ಮಲಗಿದ್ದ ಬಾಡಿಗೆದಾರ ಲಾಕ್! - Mahanayaka

ಮನೆ ಸೀಜ್ ಮಾಡಿದ ಬ್ಯಾಂಕ್ ಅಧಿಕಾರಿಗಳು: ಮನೆ ಒಳಗೆ ಮಲಗಿದ್ದ ಬಾಡಿಗೆದಾರ ಲಾಕ್!

kengeri
17/08/2023


Provided by

ಬೆಂಗಳೂರು:  ಮನೆ ಮಾಲಿಕ ಸಾಲ ಮಾಡಿದ್ದಕ್ಕೆ  ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದು, ಮನೆಗೆ ಬೀಗ ಹಾಕುವ ವೇಳೆ ಮನೆಯನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದ ವ್ಯಕ್ತಿ ಮನೆಯೊಳಗಿದ್ದರೂ, ಗಮನಿಸದೇ ಆತನನ್ನು ಒಳಗೆಯೇ ಬಿಟ್ಟು ಸೀಝ್ ಮಾಡಿದ ಘಟನೆ ಕೆಂಗೇರಿ ಉಪನಗರದಲ್ಲಿ ನಡೆದಿದೆ.

ಮನೆ ಮಾಲಿಕನು ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 2 ಕೋಟಿ ಸಾಲ ಪಡೆದಿದ್ದನು. ಹೀಗಾಗಿ ಸಿಬ್ಬಂದಿ ಕೋರ್ಟ್ ನಿಂದ ಅನುಮತಿ ಪಡೆದು ಬ್ಯಾಂಕ್ ಲೋನ್ ರಿಕವರಿಗೆ ಸಂಜೆ ಕೆಂಗೇರಿ ಉಪನಗರದಲ್ಲಿರುವ ಮೂರಂತಸ್ಥಿನ ಮನೆಗೆ ಬಂದಿದ್ದು, ಮನೆಯನ್ನು ಸೀಜ್ ಮಾಡಿದ್ದಾರೆ. ಆದರೆ ಮನೆ ಸೀಜ್ ಮಾಡುವಾಗ ಬಾಡಿಗೆದಾರ ಮನೆಯಲ್ಲಿಯೇ ಮಲಗಿದ್ದರು. ಇದನ್ನು  ಗಮನಿಸದೇ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ.

ಬಾಡಿಗೆದಾರ ಮನೆಯೊಳಗೆ ಇರುವುದನ್ನು ಗಮನಿಸದೇ  ಕೋ ಆಪರೇಟಿವ್ ಬ್ಯಾಂಕ್‌ನ‌ ಸಿಬ್ಬಂದಿ  ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ. ಬಳಿಕ ಠಾಣೆಗೆ ದೂರು ನೀಡಿ, ಮಗನನ್ನು ಮನೆಯಿಂದ ಪೋಷಕರು ಹೊರ ಕರೆತಂದಿದ್ದಾರೆ.

ಬಾಡಿಗೆದಾರರ ಸಂಬಂಧಿ ಪ್ರಸನ್ನ ಪ್ರತಿಕ್ರಿಯಿಸಿ, ಮೂರು ತಿಂಗಳ ಹಿಂದೆ ನಮ್ಮ ತಂಗಿ  10 ಲಕ್ಷ ರೂ.ಗೆ ಲೀಸ್ ಹಾಕಿಕೊಂಡಿದ್ದರು. ಆದರೆ ಯಾವುದೇ ಮಾಹಿತಿ ನೀಡದೇ  ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಿಂದ ಸೀಜ್ ಮಾಡಲಾಗಿದೆ. ಬಾಡಿಗೆದಾರರ‌ ತಂಗಿಯ ಮಗ ಮನೆಯಲ್ಲಿಯೇ ಇದ್ದ, ಇದನ್ನು ಗಮನಿಸದೇ‌ ಬ್ಯಾಂಕಿನವರು ಮನೆ ಸೀಜ್ ಮಾಡಿದ್ದಾರೆ. ಮಗ ಒಳಗಡೆ ಇದ್ದಾನೆ ಎಂದು ಠಾಣೆಗೆ ಮಾಹಿತಿ ನೀಡಿ ಆಮೇಲೆ ಅವರು ಮಗನನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ ಎಂದರು.

ಮನೆ ಸೀಜ್ ಮಾಡಿ, ಮನೆಯಲ್ಲಿದ್ದ ವಸ್ತುಗಳನ್ನು ಬೀದಿಗೆ ಹಾಕಿದ್ದಕ್ಕೆ ಮಾಲೀಕ ಮನನೊಂದಿದ್ದು, ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ರಸ್ತೆಯಲ್ಲಿ ಒದ್ದಾಡಿದ್ದಾರೆ. ಅಂಬುಲೆನ್ಸ್ ಸಕಾಲಕ್ಕೆ ಬಾರದಿದ್ದರಿಂದ ಕಾರಿನಲ್ಲಿಯೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಮನೆ ಮಾಲೀಕರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆಂದು ಬಾಡಿಗೆದಾರ ಪರ ವಕೀಲರು ಆರೋಪ ಮಾಡಿದ್ದಾರೆ.

ಇತ್ತೀಚಿನ ಸುದ್ದಿ