ಅಕ್ರಮ ಸಂಬಂಧದ ಆರೋಪದಲ್ಲಿ ಯುವಕನ ಬರ್ಬರ ಹತ್ಯೆ!

24/02/2024
ಹಾವೇರಿ: ಸೋದರ ಮಾವನ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ ಆರೋಪ ಹೊರಿಸಿ ಯುವಕನೋರ್ವನನ್ನು ಸಂಬಂಧಿಕರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಭುದೇವ ಅರಳಿ(31) ಹತ್ಯೆಗೀಡಾದ ಯುವಕನಾಗಿದ್ದಾನೆ.
ಶರಣಪ್ಪ ಹಾವಿನಾಳ ಹಾಗೂ ಲಿಂಗಾರಾಜ್ ಹಾವಿನಾಳ ಹತ್ಯೆ ಮಾಡಿದ ಆರೋಪಿಗಳಾಗಿದ್ದಾರೆ. ಆರೋಪಿಗಳ ತಾಯಿಯ ಜೊತೆಗೆ ಪ್ರಭುದೇವನಿಗೆ ಅಕ್ರಮ ಸಂಬಂಧ ಹೊಂದಿರೋದಾಗಿ ಆರೋಪಿಸಲಾಗಿದೆ.
ಹಾವನೂರು ಜಾತ್ರೆಗೆ ಬಂದಿದ್ದ ಪ್ರಭುದೇವನನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ ಗುತ್ತಲ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.