ಮುಸ್ಲಿಂ ಮಹಿಳೆ ಮನೆ ಖರೀದಿಸಿದ್ದಕ್ಕೆ ವಿರೋಧ: ಸಾಮೂಹಿಕ ವಲಸೆ ಹೋಗುವ ಬೆದರಿಕೆ

ತಮ್ಮ ಪ್ರದೇಶದಲ್ಲಿ ಮುಸ್ಲಿಂ ಮಹಿಳೆ ಮನೆ ಖರೀದಿಸಿರುವುದಕ್ಕೆ ಉತ್ತರಪ್ರದೇಶದ ಪಂಜಾಬ್ ಪುರದ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು ಸರ್ಕಾರ ಈ ಮುಸ್ಲಿಂ ಮಹಿಳೆಯ ಮನೆ ನೋಂದಣಿಯನ್ನು ರದ್ದು ಪಡಿಸದಿದ್ದರೆ ನಾವೆಲ್ಲ ಸಾಮೂಹಿಕವಾಗಿ ಇಲ್ಲಿಂದ ವಲಸೆ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಪ್ರದೇಶಕ್ಕೆ ‘ವಕೀಲೊ ವಾಲಿ ಗಲಿ’ ಎಂಬ ಹೆಸರೂ ಇದ್ದು ವಕೀಲರೆ ಹೆಚ್ಚಿರುವ ಪ್ರದೇಶ ಇದಾಗಿದೆ ಮತ್ತು ವಕೀಲರೇ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು ಎಂದು ಹೇಳಲಾಗಿದೆ. ಈ ಪ್ರದೇಶದ ವಿಶಾಲ್ ಸಕ್ಸೆನಾ ಎಂಬವರು ತಮ್ಮ ಮನೆಯನ್ನು ಶಬ್ನಮ್ ಎಂಬುವರಿಗೆ ಮಾರಿದ್ದರು.
ಬಾರ್ ಅಸೋಸಿಯೇಷನ್ ನ ಮಾಜಿ ಕಾರ್ಯದರ್ಶಿ ಅರವಿಂದ ಶ್ರೀವಾತ್ಸವ ಈ ಕುರಿತಂತೆ ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪಕ್ಕದ ಮಸೀದಿಯಲ್ಲಿರುವ ಅಸ್ಸಾಂನ ಮೌಲಾನ ಈ ಜಾಗ ಮಾರಾಟದಲ್ಲಿ ಭಾಗಿಯಾಗಿದ್ದಾರೆ. ಮುಸ್ಲಿಮರಿಗೆ ಈ ಜಾಗ ಮಾರಿರುವುದರಿಂದ ಮುಂದಕ್ಕೆ ಇಲ್ಲಿ ಮುಸ್ಲಿಮರು ಹೆಚ್ಚಾಗಬಹುದು ಮತ್ತು ಅದು ಲವ್ ಜಿಹಾದ್ ಗೆ ಕಾರಣವಾಗಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮುಖ್ಯವಾಗಿ ಇಲ್ಲಿನ ಮಹಿಳೆಯರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ನಾವು ಪೂರ್ಣಪ್ರಮಾಣದ ಸಸ್ಯಾಹಾರಿಗಳಾಗಿದ್ದು ಮುಸ್ಲಿಮರು ಮಾಂಸ ಸೇವಿಸುತ್ತಾರೆ. ಅವರ ಈ ಆಹಾರ ಕ್ರಮವು ಭವಿಷ್ಯದಲ್ಲಿ ನಮ್ಮ ಮಕ್ಕಳ ಮೇಲೆ ಪ್ರಭಾವ ಬೀರಬಹುದು ಎಂದು ಇಲ್ಲಿನ ಮಹಿಳೆಯರು ಹೇಳಿದ್ದಾರೆ. ವಿಶೇಷ ಏನೆಂದರೆ ಈ ಪ್ರದೇಶವು ಶಿಕ್ಷಕರ ಪ್ರದೇಶ ಎಂಬುದಾಗಿ ಗುರುತಿಸಿಕೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth