ಇಂದು ರಾತ್ರಿಯೇ ಬೆಂಗಳೂರಿಗೆ  ಬರ್ತಾರಾ ಪ್ರಜ್ವಲ್ ರೇವಣ್ಣ?: ಹೌದು ಅಂತಿದೆ ಈ ವರದಿ! - Mahanayaka
11:05 PM Wednesday 14 - January 2026

ಇಂದು ರಾತ್ರಿಯೇ ಬೆಂಗಳೂರಿಗೆ  ಬರ್ತಾರಾ ಪ್ರಜ್ವಲ್ ರೇವಣ್ಣ?: ಹೌದು ಅಂತಿದೆ ಈ ವರದಿ!

prajwal revanna
15/05/2024

ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ   ಹಾಸನ ಲೈಂಗಿಕ ಹಗರಣ ಕೇಸ್‌ ನ ಪ್ರಮುಖ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ 12:30ಕ್ಕೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಟಿವಿ ವರದಿಗಳ ಪ್ರಕಾರ, ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಚ್‌ ನಿಂದ ಲುಫ್ತಾನ್ಸಾ ಏರ್‌ ಲೈನ್ಸ್‌ ವಿಮಾನದಲ್ಲಿ ಬಿಜಿನೆಸ್ ಕ್ಲಾಸ್‌ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೇ 16ರಂದು 12:30ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಲಿರುವ ಲುಫ್ತಾನ್ಸಾ ವಿಮಾನದಲ್ಲಿ ಮ್ಯೂನಿಚ್–ಬೆಂಗಳೂರು ಟಿಕೆಟ್ ಅನ್ನು ಪ್ರಜ್ವಲ್ ರೇವಣ್ಣ ಬುಕ್ ಮಾಡಿದ್ದಾರೆ. ಈ ಟಿಕೆಟ್‌ನ ಪ್ರತಿ ಲಭ್ಯವಾಗಿದೆ ಎಂದು ಎನ್‌ ಡಿಟಿವಿ ವರದಿ ಹೇಳಿದೆ.

ಲಭ್ಯ ಲುಫ್ತಾನ್ಸಾ ಏರ್‌ ಟಿಕೆಟ್‌ ಮಾಹಿತಿ ಪ್ರಕಾರ, ಪ್ರಜ್ವಲ್ ರೇವಣ್ಣ ಅವರನ್ನು ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕ ಎಂದು ನಮೂದಿಸಲಾಗಿದೆ. 33 ವರ್ಷದ ಪ್ರಜ್ವಲ್ ರೇವಣ್ಣ ಜರ್ಮನಿಗೆ ಟಿಕೆಟ್ ಕಾಯ್ದಿರಿಸಿದ ಅದೇ ದಿನ ಈ ಟಿಕೆಟ್ ಅನ್ನು ಬುಕ್ ಮಾಡಿರುವುದಾಗಿ ನಂಬಲಾಗಿದೆ. ಈ ಟಿಕೆಟ್‌ ಅವರ ವಿರುದ್ಧ ಎಫ್‌ ಐಆರ್ ದಾಖಲಾಗುವ ಒಂದು ದಿನ ಮೊದಲು ಬುಕ್ ಆಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ