7 ವರ್ಷಗಳ ಬಳಿಕ ಮಗನನ್ನು ಭೇಟಿ ಮಾಡಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ - Mahanayaka

7 ವರ್ಷಗಳ ಬಳಿಕ ಮಗನನ್ನು ಭೇಟಿ ಮಾಡಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ

09/01/2025


Provided by

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಝಿಯಾ ಅವರು ಏಳು ವರ್ಷಗಳ ಬಳಿಕ ತನ್ನ ಹಿರಿಯ ಮಗ ತಾರೀಖ್ ರಮಝಾನ್ ಅವರನ್ನು ಲಂಡನ್ ನಲ್ಲಿ ಭೇಟಿಯಾಗಿದ್ದಾರೆ. ಎರಡು ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಖಲೀದಾ ಝಿಯಾ ಅವರನ್ನು ಪದಚುತ ಪ್ರಧಾನಿ ಶೇಕ್ ಹಸೀನಾ ಅವರು ವರ್ಷಗಳ ಕಾಲ ಜೈಲಲ್ಲಿಟ್ಟು ಸತಾಯಿಸಿದ್ದರು ಮತ್ತು ಮಗ ತಾರಿಕ್ ರಮಝಾನ್ ಅವರನ್ನು ದೇಶದಿಂದ ಹೊರ ಹಾಕಿದ್ದರು.

ತಾರಿಕ್ ಅವರ ಮೇಲೆ ಹಸೀನಾ ಸರಕಾರ ಹಲವು ಪ್ರಕರಣಗಳನ್ನು ದಾಖಲಿಸಿತು. ಆ ಕಾರಣದಿಂದ 2008ರಲ್ಲಿ ಅವರು ಬಾಂಗ್ಲಾದೇಶದಿಂದ ಹೊರ ಹೋಗಬೇಕಾಯಿತು. ಚಿಕಿತ್ಸೆಗಾಗಿ 2017ರಲ್ಲಿ ಜಿಯಾ ಅವರು ಲಂಡನಿಗೆ ಪ್ರಯಾಣಿಸಿದಾಗ ಅಲ್ಲಿ ತನ್ನ ಮಗನನ್ನು ಅವರು ಭೇಟಿಯಾಗಿದ್ದರು.

ಶೇಕ್ ಹಸೀನಾ ಅವರು ಸರ್ವಾಧಿಕಾರಿಯಾಗಿ ವರ್ತಿಸಿದ್ದಲ್ಲದೆ ಇತರ ಯಾವುದೇ ನಾಯಕರು ಬೆಳೆಯದಂತೆ ನೋಡಿಕೊಂಡ ಪರಿಣಾಮ ಝಿಯಾ ಹಲವು ವರ್ಷಗಳ ಕಾಲ ಜೈಲಲ್ಲಿ ಇರಬೇಕಾಯಿತು. ಅವರ ಪಕ್ಷದ ಕಾರ್ಯಕರ್ತರು ಮತ್ತು ನಾಯಕರನ್ನು ಕೂಡ ಅವರು ದಮನಿಸಿದರು. ಇದೀಗ ಹಸೀನಾ ಅವರು ಭಾರತಕ್ಕೆ ಪಲಾಯನಗೊಂಡಿದ್ದು ಅಲ್ಲಿ ಮೊಹಮದ್ ಯೂನುಸ್ ಅವರ ತಾತ್ಕಾಲಿಕ ಸರ್ಕಾರವಿದೆ. ಅವರು ಅಧಿಕಾರಕ್ಕೆ ಬಂದ ಕೂಡಲೇ ಝಿಯಾ ಅವರನ್ನು ಬಂಧನದಿಂದ ಮುಕ್ತಗೊಳಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ