ಪ್ರೀತಿ ಮಾಯೆ ಹುಷಾರು…! | ಯುವತಿ ಕೈಕೊಟ್ಟಿದ್ದಕ್ಕೆ ಭಗ್ನ ಪ್ರೇಮಿ ಬಾಟಲಿಯಿಂದ ತಲೆ ಹೊಡೆದುಕೊಂಡ!

ಚಿಕ್ಕಮಗಳೂರು: ಕಾಫಿತೋಟದಲ್ಲಿ ಅರಳಿದ ಪ್ರೀತಿ, ಹುಡುಗಿ ಬೇರೆ ಯುವಕನ ಜೊತೆಗೆ ಮದುವೆಯಾಗುವುದರೊಂದಿಗೆ ಕೊನೆಗೊಂಡಿತು. ಈಗ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿರುವ ಯುವಕ ಅಕ್ಷರಶಃ ದೇವದಾಸನಂತೆ ರಸ್ತೆಯಲ್ಲಿ ಅಲೆದಾಡುತ್ತಿದ್ದಾನೆ. ಬಾಟಲಿಯಿಂದ ತಲೆ ಹೊಡೆದುಕೊಂಡು ರಕ್ತ ಸುರಿಸಿಕೊಳ್ಳುತ್ತಿದ್ದಾನೆ.
ಹೌದು..! ಈ ಘಟನೆ ನಡೆದಿರುವುದು ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ನಲ್ಲಿ. ತಮಿಳುನಾಡು ಮೂಲದ ಯುವಕನಿಗೆ ಕಾಫಿತೋಟದ ಕೆಲಸಕ್ಕೆ ಬಂದಾಗ ಹುಡುಗಿ ಜೊತೆ ಪ್ರೇಮಾಂಕುರವಾಗಿದೆ. ಆದ್ರೆ ಇತ್ತೀಚೆಗೆ ಯುವತಿಗೆ ಬೇರೆ ಮದುವೆಯಾಗಿದ್ದು, ಆಕೆ ಕೈಕೊಟ್ಟಿದ್ದರಿಂದ ಹುಚ್ಚನಂತಾದ ಯುವಕ ತಮಿಳುನಾಡಿಗೆ ಹಿಂದಿರುಗಿದ್ದ.
ಇದೀಗ ಆಕೆಯನ್ನು ಮರೆಯಲು ಸಾಧ್ಯವಾಗದೇ ಮರಳಿ ಕಾಫಿನಾಡಿಗೆ ಬಂದಿದ್ದಾನೆ. ಪ್ರೀತಿಸಿ ಮೋಸ ಹೋದ ಯುವಕ ಚೆಕ್ ಪೋಸ್ಟ್ ನಲ್ಲಿ ನಡು ರಸ್ತೆಯಲ್ಲಿ ತಲೆಗೆ ಬಾಟಲಿಯಿಂದ ಹೊಡೆದುಕೊಂಡಿದ್ದಾನೆ. ಏಟಿನ ತೀವ್ರತೆಗೆ ಬುರುಡೆ ಒಡೆದು ರಕ್ತ ಸುರಿಸುತ್ತಾ, ರಸ್ತೆ ಬದಿಯಲ್ಲಿ ಯುವಕ ಹುಚ್ಚನಂತೆ ಕುಳಿತಿದ್ದಾನೆ.
ಯುವಕನ ಸ್ಥಿತಿ ಕಂಡು ಚೆಕ್ ಪೋಸ್ಟ್ ಸಿಬ್ಬಂದಿ ಮತ್ತು ಪೊಲೀಸರು ಆ್ಯಂಬುಲೆನ್ಸ್ ಕರೆಸಿ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD