ಬೆದರಿಸಿ ಚಿನ್ನಾಭರಣ ಸುಳಿಗೆ | ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ದೂರು ನೀಡಿದ ನಿವೃತ್ತ ನೌಕರ - Mahanayaka
12:39 PM Monday 1 - September 2025

ಬೆದರಿಸಿ ಚಿನ್ನಾಭರಣ ಸುಳಿಗೆ | ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ದೂರು ನೀಡಿದ ನಿವೃತ್ತ ನೌಕರ

15/11/2020


Provided by

ಹುಬ್ಬಳ್ಳಿ: ನಿವೃತ್ತ ನೌಕರರೊಬ್ಬರು ಪೊಲೀಸ್ ಅಧಿಕಾರಿಗಳು ತನಗೆ ಬೆದರಿಕೆಯೊಡ್ಡಿ, 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಿತ್ತುಕೊಂಡಿದ್ದಾರೆ ಎಂದು 3ನೇ ಜೆಎಂಎಫ್​​ಸಿ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

ನವನಗರದ ನಿವಾಸಿ ಓಂಕಾರಗೌಡ ಪಾಟೀಲ ಎಂಬವರು ಈ ದೂರು ನೀಡಿದ್ದು, ಹಾಲಿ ಎಪಿಎಂಸಿ ಇನ್ಸಪೆಕ್ಟರ್ ಪ್ರಭು ಸೂರಿನ್ ಹಾಗೂ ಬೆಂಗಳೂರಿನ ಶಿವಲೀಲಾ ಪಾಟೀಲ್ ಹಾಗೂ ಸಂತೋಷಕುಮಾರ ಗುಡ್ಡಾಪುರಮಠ ಎಂಬವರು ತನ್ನ ಚಿನ್ನಾಭರಣವನ್ನು ಕಿತ್ತುಕೊಂಡಿರುವುದಾಗಿ ಅವರು ಆರೋಪಿಸಿದ್ದಾರೆ.

ಚಿನ್ನಾಭರಣ ಕಿತ್ತುಕೊಂಡ ಬಗ್ಗೆ ಪದೇ ಪದೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪ್ರಕರಣವನ್ನ ದಾಖಲಿಸಿಕೊಂಡಿಲ್ಲವಂತೆ. ಹೀಗಾಗಿ ಓಂಕಾರಗೌಡ ಪಾಟೀಲ, 3ನೇ ಜೆಎಂಎಫ್ ​​ಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಆದರೆ ಆರೋಪಿಯೇ ಇನ್ಸ್ ಪೆಕ್ಟರ್ ಆಗಿರುವ ಕಾರಣ ಹೇಗೆ ತನಿಖೆ ನಡೆಯುತ್ತದೆ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಇತ್ತೀಚಿನ ಸುದ್ದಿ