ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ - Mahanayaka

ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ

moodigere
28/09/2023


Provided by

ಚಿಕ್ಕಮಗಳೂರು: ಹೆಜ್ಜೇನು ದಾಳಿ ಮಾಡಿದ ಪರಿಣಾಮ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಮೂಡಿಗೆರೆ ತಾಲ್ಲೂಕಿನ ಕಲ್ಲಕ್ಕಿ ಎಸ್ಟೇಟ್ ನಲ್ಲಿ ನಡೆದಿದೆ.

ತಾಲೂಕಿನ ಬಾಳೂರು ಸಮೀಪದ ಕಲ್ಲಕ್ಕಿ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರ ಮೇಲೆ ಏಕಾ ಏಕಿ ದಾಳಿ ನಡೆಸಿದ್ದು ಕಾರ್ಮಿಕರು ಭಯಭಿತರಾಗಿ ದಿಕ್ಕಾಪಾಲಗಿ ಓಡಿದ್ದಾರೆ.5ಜನರ ಮೇಲೆ ದಾಳಿ ನಡೆಸಿದೆ.ವಿನೋದ. ಪುಷ್ಪ. ಪ್ರೇಮ. ಎಂಬುವವರು ಗಾಯಗೊಂಡಿದ್ದಾರೆ ಗಾಯಗೊಂಡವರನ್ನ ಬಣಕಲ್ ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ತೋಟಗಳಲ್ಲಿ ಜೇನುಗಳು ಗೂಡು ಕಟ್ಟಿಕೊಂಡಿದ್ದು, ರಸ್ತೆಯಲ್ಲಿ ಓಡಾಡುವವರ ಮೇಲೆ ಹಾಗೂ ಕೂಲಿ ಕೆಲಸ ಮಾಡುವವರ ಮೇಲೆ ದಾಳಿ ಮಾಡುತ್ತಿವೆ. ಇದರಿಂದಾಗಿ ಯುವಕರು, ಯುವತಿಯರು ಸೇರಿದಂತೆ ಗ್ರಾಮದ ಹಲವರು ಜೇನು ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ ಉದಾಹರಣೆ ಸಾಕಷ್ಟು ನಡೆದಿವೆ , ಜೇನು ಹುಳುಗಳ ಹಠಾತ್ ದಾಳಿಗೆ ಆತಂಕಗೊಂಡಿರುವ ಗ್ರಾಮಸ್ಥರು ದಾಳಿ ನಡೆದ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುವಂತಾಗಿದೆ.

 

ಇತ್ತೀಚಿನ ಸುದ್ದಿ