ಬಿಯರ್ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್! - Mahanayaka

ಬಿಯರ್ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್!

beer price
14/05/2025

ಬೆಂಗಳೂರು: ಬಿಯರ್ ಪ್ರಿಯರಿಗೆ ಮತ್ತೆ ಶಾಕ್ ಕಾದಿದೆ ಈ ಬಾರಿ ಮತ್ತೊಮ್ಮೆ ಬಿಯರ್ ದರ ಎರಿಕೆಯಾಗಲಿದೆ. ರಾಜ್ಯ ಸರ್ಕಾರವು ಮತ್ತೆ ಎಇಡಿ ಏರಿಕೆ ಮಾಡಿ ಮಂಗಳವಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಪರಿಷ್ಕೃತ ದರವು ಮೇ 15 ಜಾರಿಯಾಗಲಿದೆ.

ಐಎಂಎಲ್‌ ಮೊದಲ ಮೂರು ಸ್ಪ್ಯಾಬ್‌ ಗಳಿಗೆ (180 ಮಿಲಿ ಲೀಟರ್‌) 15 ರೂ. ಹಾಗೂ ನಾಲ್ಕನೇ ಸ್ಪ್ಯಾಬ್‌ ಗೆ 5 ರೂ. ಏರಿಕೆ ಮಾಡಲಾಗಿದೆ. ಅದೇ ರೀತಿ ಬಿಯರ್‌ ಮೇಲಿನ ಎಇಡಿಯನ್ನು ಶೇಕಡಾ 195 ರಿಂದ ಶೇ.200ಕ್ಕೆ,  ಶೇಕಡಾ 5 ರಷ್ಟು ಹೆಚ್ಚಳ ಮಾಡಲಾಗಿದೆ.

ಹೊಸ ದರದ ಅನ್ವಯ ಪ್ರತಿ ಬಾಟಲಿಗೆ ಸರಾಸರಿ 10 ರಿಂದ 15 ರೂ. ಏರಿಕೆ ಆಗಬಹುದೆಂದು ಹೇಳಲಾಗುತ್ತಿದೆ.  ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬ್ರ್ಯಾಂಡ್‌ ಗಳ ಬಿಯರ್‌ ದರ 5 ರೂ.ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಆಲ್ಕೋಹಾಲ್‌ ಪ್ರಮಾಣ ಹೆಚ್ಚಿರುವ ಬ್ರ್ಯಾಂಡ್‌ ಗಳ ಬಿಯರ್‌ ಬೆಲೆಯು ಗಣನೀಯವಾಗಿ ಏರಿಕೆಯಾಗಲಿದೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ