ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ |  ನಜ್ಜುಗುಜ್ಜಾದ ಕಾರು - Mahanayaka
5:40 AM Tuesday 16 - September 2025

ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ |  ನಜ್ಜುಗುಜ್ಜಾದ ಕಾರು

car acedinrt
05/01/2022

ರಾಜಸ್ಥಾನ: ಟ್ರಕ್ ಹಾಗೂ ಲಾರಿ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ  ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಬೇರಾ ಛೇದಕ ಪ್ರದೇಶದಲ್ಲಿ ನಡೆದಿದೆ.


Provided by

ಎರಡೂ ವಾಹನಗಳು ಅತೀ ವೇಗದ ಚಾಲನೆಯೊಂದಿಗೆ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು,  ಅಪಘಾತದ ವೇಗಕ್ಕೆ ಟ್ರಕ್ ಮಗುಚಿ ಬಿದ್ದಿದ್ದರೆ,  ಕಾರು ನಜ್ಜುಗುಜ್ಜಾಗಿದೆ.

ಘಟನೆಯಲ್ಲಿ  ಮೃತಪಟ್ಟವರನ್ನು ರಾಜಸ್ಥಾನದ ರಾಜಸಮಂದ್ ಜಿಲ್ಲೆಯ ರೈಲ್ ಮಾಂಗ್ರಾದವರು ಎಂದು ಗುರುತಿಸಲಾಗಿದ್ದು, ದೇವಿಲಾಲ್, ಅವರ ಪತ್ನಿ, ಮಗ ಹಾಗೂ ಮಗಳು ಅಪಘಾತದಲ್ಲಿ ಮೃತಪಟ್ಟವರು ಎಂದು ಹೇಳಲಾಗಿದೆ.

ಕಾರು ನಜ್ಜುಗುಜ್ಜುಗೊಂಡ ಪರಿಣಾಮ ಮೃತರ ದೇಹ ಕಾರಿನಲ್ಲಿ ಸಿಲುಕಿಕೊಂಡಿದೆ.  ಮೃತದೇಹಗಳನ್ನು ಕಾರಿನಿಂದ ಹೊರ ತೆಗೆಯಲು ಪೊಲೀಸರು ಸಾಕಷ್ಟು ಹರಸಾಹಸ ಪಡುವಂತಾಯಿತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎಲ್ಲಾ ಕಡೆ ವೀಕೆಂಡ್ ಕರ್ಫ್ಯೂ ಯಾಕೆ? | ಸರ್ಕಾರದ ನಿರ್ಧಾರದ ಬಗ್ಗೆ ಸಚಿವ ಈಶ್ವರಪ್ಪ ಅಸಮಾಧಾನ

ಶಿಲುಬೆ ತೆರವಿಗೆ ಬಜರಂಗದಳ ಯತ್ನ: ಪೊಲೀಸರ ಜೊತೆಗೆ ಘರ್ಷಣೆ!

ಸೊಸೆಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ ಮಾವ!

ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೇಸರಿ ಶಾಲು ಧರಿಸಿ ಪ್ರತಿಭಟನೆ!

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಯಾವ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ? | ಏನೇನು ನಿರ್ಬಂಧಗಳಿವೆ?

 

ಇತ್ತೀಚಿನ ಸುದ್ದಿ