ಓವರ್ ಟೇಕ್ ಭರದಲ್ಲಿ  ಆಟೋಗೆ ಡಿಕ್ಕಿ ಹೊಡೆದ ಬೊಲೋರೊ ವಾಹನ: ನಾಲ್ಕು ಜನರಿಗೆ ಗಂಭೀರ ಗಾಯ - Mahanayaka
1:11 PM Tuesday 16 - September 2025

ಓವರ್ ಟೇಕ್ ಭರದಲ್ಲಿ  ಆಟೋಗೆ ಡಿಕ್ಕಿ ಹೊಡೆದ ಬೊಲೋರೊ ವಾಹನ: ನಾಲ್ಕು ಜನರಿಗೆ ಗಂಭೀರ ಗಾಯ

bulero
29/12/2022

ಉಜಿರೆ: ಬೊಲೋರೊ ವಾಹನವೊಂದು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದು ಆಟೋದಲ್ಲಿದ್ದ ನಾಲ್ಕು ಜನರಿಗೆ ಗಂಭೀರ ಗಾಯಗೊಂಡ ಘಟನೆ ಉಜಿರೆಯ ಓಡಲ ಕ್ರಾಸ್ ನಲ್ಲಿ ಡಿ.28 ರಂದು ರಾತ್ರಿ ನಡೆದಿದೆ.


Provided by

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಓಡಲ ಕ್ರಾಸ್ ನಲ್ಲಿ ಬೆಳಾಲು ಕಡೆಯಿಂದ ಉಜಿರೆ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಉಜಿರೆ ಕಡೆಯಿಂದ ಬರುತ್ತಿದ್ದ ಕಾರ್ಯತಡ್ಕ ನಿವಾಸಿ ಚಾಲಕ ಸಾಂತಪ್ಪ ಎಂಬವರ ಬೊಲೋರೊ ವಾಹನ ಓವರ್ ಟೇಕ್  ಮಾಡುವ ರಭಸದಲ್ಲಿ ಡಿ.28 ರಂದು ರಾತ್ರಿ ಸುಮಾರು 8:30 ಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ರಿಕ್ಷಾದಲ್ಲಿದ್ದ ಚಾಲಕ ಸೇರಿ ನಾಲ್ಕು ಮಂದಿಗೆ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಕ್ಷಾ ಚಾಲಕ ಗುರಿಪಳ್ಳ ನಿವಾಸಿ ಪ್ರವೀಣ್(42) , ಕುಪ್ಪೆಟ್ಟಿ ನಿವಾಸಿ ರಫೀಕ್(55) ಕೊಟ್ಟಿಗೆಹಾರ ನಿವಾಸಿಗಳಾದ ಸುಹೈಲ್ (30) ಹಾಗೂ  ಚೇತನ್(27) ಗಂಭೀರವಾಗಿ ಗಾಯಗೊಂಡಿದ್ದರೆ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದರಲ್ಲಿ ಸುಹೈಲ್ ಅವರ ತಲೆಯ ಭಾಗಕ್ಕೆ ಆಳವಾದ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ಎರಡು ವಾಹನಗಳಿಗೆ ಹಾನಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ