ಭೀಮ್ ಸೇನೆ ದಕ್ಷಿಣ ಕನ್ನಡ ವತಿಯಿಂದ ಸಂವಿಧಾನ ದಿನಾಚರಣೆ - Mahanayaka
6:43 PM Thursday 15 - January 2026

ಭೀಮ್ ಸೇನೆ ದಕ್ಷಿಣ ಕನ್ನಡ ವತಿಯಿಂದ ಸಂವಿಧಾನ ದಿನಾಚರಣೆ

jai bheem
27/01/2022

ಮಂಗಳೂರು: ಭೀಮ್ ಸೇನೆ ದಕ್ಷಿಣ ಕನ್ನಡ ವತಿಯಿಂದ ಭಾರತದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷ(ಬಿಎಸ್ ಪಿ)ದ ಜಿಲ್ಲಾ ಅಧ್ಯಕ್ಷರಾದ ದಾಸಪ್ಪ ಎಡಪದವು, ಸತ್ಯ ಸಾರಮಾನಿ ಕ್ಷೇತ್ರ ಮುತ್ತೂರು ಇದರ ಪ್ರಧಾನ ಅರ್ಚಕರಾದ ಹರಿಯಪ್ಪ ಮುತ್ತೂರು, ಬಹುಜನ ಯುವ ಸಾಹಿತಿಗಳಾದ ಸತೀಶ್ ಕಕ್ಕೆಪದವು, ಜೈಭೀಮ್ ವಿದ್ಯಾರ್ಥಿ ಸಂಘದ ಸದಸ್ಯರಾದ ಕುಮಾರಿ ಅನುಷಾ ಮುತ್ತೂರು, ಜೈಭೀಮ್ ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡದ ಸಂಚಾಲಕರಾದ ಜಗದೀಶ್ ಮುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂವಿಧಾನ ಮಹತ್ವವನ್ನು , ಪರಮಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂದೇಶವನ್ನು ಜನತೆಗೆ ನೆನಪಿಸಲಾಯಿತು. ಮಹೇಶ್ ಮುತ್ತೂರು ಸ್ವಾಗತಿಸಿ, ಯಕ್ಷಿತ್ ಮುತ್ತೂರು ಭೀಮ ವಂದನೆ ಸಲ್ಲಿಸಿದರು. ನಿತಿನ್ ಮುತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭೀಮಸೇನೆ ದಕ್ಷಿಣ ಕನ್ನಡದ ಸದಸ್ಯರು, ಮಾತೆ ಸಾವಿತ್ರಿ ಬಾಯಿ ಫುಲೆ ಮಹಿಳಾ ಮಂಡಳದ ಸದಸ್ಯರು, ಜೈಭೀಮ್ ವಿದ್ಯಾರ್ಥಿ ಸಂಘದ ಸದಸ್ಯರು, ಸತ್ಯ ಸಾರಮಾನಿ ಕ್ಷೇತ್ರ ಮುತ್ತೂರು ಇದರ ಸದಸ್ಯರು ಪಾಲ್ಗೊಂಡು ಸಂವಿಧಾನ ದಿನಾಚರಣೆಯು ಯಶಸ್ವಿಯಾಗಿ ನಡೆಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸ್ಟೇರಿಂಗ್ ತುಂಡಾಗಿ ಬಸ್ ಪಲ್ಟಿ: 20 ಮಂದಿ ಗಂಭೀರ

ಸಂವಿಧಾನ ದಿನವೇ ಅಂಬೇಡ್ಕರ್ ಗೆ ಅವಮಾನ ಮಾಡಿದ ನ್ಯಾಯಾಧೀಶ: ಕೋರ್ಟ್ ಆವರಣದಲ್ಲಿಯೇ ಉದ್ಧಟತನದ ವರ್ತನೆ

ಗಣರಾಜ್ಯೋತ್ಸವ ವೇಳೆ ವಿದ್ಯುತ್ ಸ್ಪರ್ಶಿಸಿ ಓರ್ವ ವಿದ್ಯಾರ್ಥಿ ಸಾವು

ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ

ಮಾನವ ಕಳ್ಳಸಾಗಣೆ: 41 ಆರೋಪಿಗಳಿಗೆ ಕಠಿಣ ಶಿಕ್ಷೆ

 

ಇತ್ತೀಚಿನ ಸುದ್ದಿ