ಬಂಗಾಳ ಹಲ್ಲೆ ಪ್ರಕರಣ: ಕೋರ್ಟ್ ಗೆ ಹಾಜರಾಗುವಂತೆ ಆರೋಪಿಗಳಿಗೆ ಮಹಿಳಾ ಆಯೋಗ ಸೂಚನೆ - Mahanayaka

ಬಂಗಾಳ ಹಲ್ಲೆ ಪ್ರಕರಣ: ಕೋರ್ಟ್ ಗೆ ಹಾಜರಾಗುವಂತೆ ಆರೋಪಿಗಳಿಗೆ ಮಹಿಳಾ ಆಯೋಗ ಸೂಚನೆ

01/07/2024


Provided by

ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಪುರುಷ ಮತ್ತು ಮಹಿಳೆಯನ್ನು ಸಾರ್ವಜನಿಕವಾಗಿ ಥಳಿಸಿದ ಪಶ್ಚಿಮ ಬಂಗಾಳದ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.

ಉತ್ತರ ದಿನಾಜ್ಪುರದಲ್ಲಿ ಕಳೆದ ವಾರ ಈ ಘಟನೆ ನಡೆದಿತ್ತು.
“ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರದ ಲಕ್ಷ್ಮಿಕಾಂತಪುರದಲ್ಲಿ ಆತಂಕಕಾರಿ ಘಟನೆ ನಡೆದಿದ್ದು, ಖಂಡನೀಯ‌. ಇಲ್ಲಿ ಮಹಿಳೆಯನ್ನು ಕ್ರೂರವಾಗಿ ಥಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ.

ಜುಲೈ 4 ರಂದು ಮಧ್ಯಾಹ್ನ 2.30 ಕ್ಕೆ ಈ ವಿಷಯದ ವಿಚಾರಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
“ವಿಚಾರಣೆಯನ್ನು ಜುಲೈ 4, 2024 ರಂದು ಮಧ್ಯಾಹ್ನ 2:30 ಕ್ಕೆ ನಿಗದಿಪಡಿಸಲಾಗಿದೆ. ಖುದ್ದಾಗಿ ಹಾಜರಾಗುವಂತೆ ಅಥವಾ ಕ್ರಮವನ್ನು ಎದುರಿಸಲು ತಾಜೆಮುಲ್ ಗೆ ಪತ್ರ ಕಳುಹಿಸಲಾಗಿದೆ. ಮಹಿಳೆಯರ ವಿರುದ್ಧದ ಅಪರಾಧಗಳಿಗಾಗಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಆಯೋಗಕ್ಕೆ ಕಳವಳಕಾರಿಯಾಗಿವೆ” ಎಂದು ಅದು ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ